- ಪೊಲೀಸರಿಂದ ರೌಡಿ ಶೀಟರ್ ಕಾಲಿಗೆ ಗುಂಡು

ವಿನೋಭನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭವಿತ್ ಎನ್ನುವ ಆರೋಪಿಯ ಕಾಲಿಗೆ ಪಿಎಸ್‌ಐ ಗುಂಡು ಹಾರಿಸಿದ್ದಾರೆ. ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಭವಿತ್ ವಿರುದ್ದ ಕೊಲೆ ಪ್ರಕರಣ, ದರೋಡೆ, ಕೊಲೆ ಯತ್ನ ಪ್ರಕರಣಗಳು ಸೇರಿದಂತೆ ಒಟ್ಟು ಏಳು ಪ್ರಕರಣಗಳಿವೆ. ಅಲ್ಲದೆ ಈತನ ವಿರುದ್ಧ ರೌಡಿಶೀಟ್ ಕೂಡ ಓಪನ್ ಆಗಿತ್ತು. ಜಿಲ್ಲೆಯಿಂದ ಗಡಿಪಾರಾದ ಬಳಿಕ ಈತ, ನಿನ್ನೆ ಶಿವಮೊಗ್ಗಕ್ಕೆ ವಾಪಸ್ ಆಗಿದ್ದ ಹಿನ್ನಲೆಯಲ್ಲಿ ಮತ್ತೆ ಕ್ಯಾತೆ ತೆಗೆದು ಜಗಳವಾಡಿದ್ದು ಪಿಎಸ್‌ಐ ಸುನಿಲ್ ಭವಿತ್‌ರನ್ನ ಅರೆಸ್ಟ್ ಮಾಡಲು ಹೋದ ಸಂದರ್ಭದಲ್ಲಿ ಅವರ ಮೇಲೆಯು ಹಲ್ಲೆಗೆ ಯತ್ನಿಸಿದ್ದ ಹಿನ್ನಲೆಯಲ್ಲಿ ಆತ್ಮರಕ್ಷಣೆಗಾಗಿ ಭವಿತ್ ಕಾಲಿಗೆ ಗುಂಡು ಹಾರಿಸಿದ್ದಾರೆ.ಎಂಬ ಮಾಹಿತಿ ಲಭ್ಯವಾಗಿದೆ.


