
ಸಾಲ ನೀಡಿದವರು ಮನೆಗೆ ಬಂದು ಗಲಾಟೆ ಮಾಡಿ ಅವ್ಯಚ್ಯ ಪದಗಳಿಂದ ನಿಂದಿಸಿ ಬೈದ ಪರಿಣಾಮ ಮಹಿಳೆಯೊಬ್ಬರು ಮನ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಗೋಂದಿ ಚಟ್ನಳ್ಳಿ ಶೋಭಾ (39) ಮೃತ ದುರ್ದೈವಿ.ಶೇ 3 ಪರ್ಸೆಂಟ್ ಬಡ್ಡಿಗೆ ಸಾಲ ಪಡೆದಿದ್ದು ತುಂಬಾ ಕಡೆ ಸಾಲ ಮಾಡಿದ್ದಾರೆ, ಇತ್ತ ಪತಿಯ ಪಾನಿಪುರಿ ವ್ಯಾಪಾರ ಕೂಡ ಕೈಕೋಟ್ಟಿತ್ತು ಈ ಹಿನ್ನಲೆ ಸಾಲ ತೀರಿಸಲು ವಿಳಂಬವಾಗಿತ್ತು, ಸಾಲ ಕೊಟ್ಟವರು ಮನೆ ಬಳಿ ಬಂದು ಗಲಾಟೆ ಮಾಡಿದ್ದು ಸಹಿಸಲಾಗದೆ ಫ್ಯಾನ್ ಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.ಮೆಗ್ಗನ್ ಆಸ್ಪತ್ರೆ ದಾಖಲು ಮಾಡಿದ್ದರು ಅದಕ್ಕೂ ಮುಂಚೆ ಶೋಭಾ ಮೃತಪಟ್ಟಿರೋದಾಗಿ ತಿಳಿಸಿದ್ದಾರೆ. ಪ್ರಕರಣ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

