
ತೀರ್ಥಹಳ್ಳಿ :ನಿರ್ಮಾಣ ಹಂತದ ಮನೆಗೆ ತಂದಿಟ್ಟಿದ್ದ ಆರ್’ಸಿಸಿ ಸೆಂಟ್ರಿಂಗ್ ಶೀಟ್ ಗಳನ್ನು ಕಳವು ಮಾಡಿದ್ದ ಆರೋಪದ ಮೇರೆಗೆ, ಗುಜುರಿ ವ್ಯಾಪಾರಿಯೋರ್ವನನ್ನು ತೀರ್ಥಹಳ್ಳಿ ತಾಲೂಕು ಮಾಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಶಿರೂರು ಸಮೀಪದ ಕುಂಬ್ರಿಕೊಡ್ಲು ಗ್ರಾಮದ ನಿವಾಸಿ ರಶೀದ್ ಯಾನೆ ಮೊಹಿದ್ದೀನ್ (42) ಬಂಧಿತ ಆರೋಪಿ. 1 ಲಕ್ಷ ರೂ. ಮೌಲ್ಯದ 150 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳು, ಕೃತ್ಯಕ್ಕೆ ಬಳಸಿದ್ದ ಸರಕು ಸಾಗಾಣೆ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಎನ್ ಕಲಗುಚ್ಚಿ, ಸರ್ಕಲ್ ಇನ್ಸ್’ಪೆಕ್ಟರ್ ರಾಜಶೇಖರ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್’ಪೆಕ್ಟರ್ ಸುನೀಲ್ ಬಿ ಸಿ, ಸಿಬ್ಬಂದಿಗಳಾದ ಸುರಕ್ಷಿತ, ಪುನೀತ್ ಕುಮಾರ್, ಸಂತೋಷ್ ಕುಮಾರ್, ಚೇತನ್ ಕುಮಾರ್, ಮೇಘರಾಜ್, ಅಭಿಲಾಷ್, ಮಂಜು, ವಸಂತ, ಸಾದುದ್ದೀನ್, ರಾಮಪ್ಪ, ಸುರೇಶ್ ನಾಯ್ಕ್ ರವರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಪೋಲೀಸರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

