
ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಓರ್ವ ಯುವಕನನ್ನು ಕುಡ ಗೋಲಿನಿಂದ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ದೊಮ್ಮಳ್ಳಿಯಲ್ಲಿ ನಡೆದಿದೆ. ದುಮ್ಮಳ್ಳಿ ನಿವಾಸಿ ಸತೀಶ್ ನಾಯ್ಕ (28 )ಕೊಲೆಯಾದ ಯುವಕ,ಶೇಷ ನಾಯ್ಕ ಹಾಗೂ ಮಂಜುನಾಯ್ಕ ಎಂಬುವವರು ಅಕ್ಕಪಕ್ಕದಲ್ಲಿ ಜಮೀನು ಹೊಂದಿದ್ದರು. ಇಬ್ಬರ ನಡುವೆ ಹಲವಾರು ವರ್ಷಗಳಿಂದ ಜಮೀನಿನ ವಿಚಾರದಲ್ಲಿ ವ್ಯಾಜ್ಯವಿತ್ತು ಈ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು ವಿಚಾರಣೆ ಮುಕ್ತಾಯ ಹಂತಕ್ಕೆ ಬಂದಿದ್ದು ಕೋರ್ಟ್ ನಲ್ಲಿ ಶೇಷ ನಾಯ್ಕ್ ಪರ ವಾಗಿ ಆಗೋ ಸಾಧ್ಯತೆ ಇತ್ತು ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದ ಮಂಜಾ ನಾಯ್ಕ್ ಪುತ್ರ ಅಖಿಲೇಶ್ ನಾಯಕ್ ಇವತ್ತು ಜಮೀನಿನಲ್ಲಿ ಸತೀಶ್ ನಾಯಕರ ಕೆಲಸ ಮಾಡೋದು ಬಂದಿದ್ದ ವೇಳೆ ಏಕಏಕಿ ದಾಳಿ ನಡೆಸಿ ಕೊಡುಗೊಲಿನಿಂದ ಕೊಚ್ಚಿ ಸತೀಶ್ ನಾಯಕ್ನನ್ನು ಕೊಲೆ ಮಾಡಿದ್ದಾನೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ ಪಿ ಮಿಥುನ್ ಕುಮಾರ್ ಪ್ರಕರಣ ಸಂಬಂಧ ಆರೋಪಿ ಅಖಿಲೇಶ್ ನನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಆರೋಪಿಗಳ ಮನೆ ಮೇಲೆ ಕಲ್ಲುತೂರಟ
ಸತೀಶ್ ನಾಯಕ್ ಎಂಬ ಯುವಕನನ್ನ ಬರ್ಬರ ಹತ್ಯೆ ಮಾಡಿದ ಆರೋಪಿ ಮಂಜನಾಯಕ್ ಮನೆ ಮೇಲೆ ಗ್ರಾಮಸ್ಥರು ಕಲ್ಲು ತೂರಿದ್ದು ಈ ವೇಳೆ ಪೊಲೀಸ್ ಸಿಬ್ಬಂದಿಗಳಿಗೂ ಕಲ್ಲು ಬಿದ್ದ ಹಿನ್ನಲೆ ಗಂಭೀರ ಗಾಯಗಳಾಗಿವೆ. ಹಾಗೂ ಆರೋಪಿ ಕುಟುಂಬದವರನ್ನ ರಕ್ಷಣೆಯೊಂದಿಗೆ ಬೇರೆ ಕಡೆಗೆ ವರ್ಗಯಿಸಲಾಗಿದೆ.

ಕೊಲೆಯಾದ ದುರ್ದೈವಿ ಸತೀಶ್


