ಶಿವಮೊಗ್ಗ : ಅವಧಿಗೂ ಮುನ್ನವೇ ಕೆಎಫ್‌ಡಿ ಕೇಸ್​​​ಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ದೊಡ್ಡ ಪ್ರಮಾಣದಲ್ಲಿ ಸ್ಫೋಟವಾಗುವ ಮುನ್ಸೂಚನೆ ನೀಡಿದೆ.ಮಲೆನಾಡು ಭಾಗದ ಗ್ರಾಮಸ್ಥರ ಜೊತೆಗೆ, ಆರೋಗ್ಯ ಇಲಾಖೆಗೂ ಈಗ ದೊಡ್ಡ ಆತಂಕ ಎದುರಾಗಿದೆ. ಜಿಲ್ಲೆಯ ಹೊಸನಗರ ತಾಲೂಕಿನ ಬಿಳ್ಳೂಡಿ-ಸೋನಲೆ ಗ್ರಾಮದಲ್ಲಿ ಕಳೆದ ವಾರ 55 ವರ್ಷದ ಮಹಿಳೆಗೆ ಕಾಣಿಸಿಕೊಂಡಿತ್ತು.

ಆರೋಗ್ಯ ಇಲಾಖೆ ಅದೇ ಊರಿನ ಮತ್ತಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಇಲ್ಲಿಯವರೆಗೆ ಒಟ್ಟು 8 ಜನರಲ್ಲಿ ಕೆ.ಎಫ್.ಡಿ. ಸೋಂಕು ಕಾಣಿಸಿಕೊಂಡಿದೆ. ಗ್ರಾಮಸ್ಥರು ಕಡ್ಡಾಯವಾಗಿ ಡಂಪ್ ಎಣ್ಣೆ ಮೈಯಿಗೆ ಲೇಪಿಸಿಕೊಳ್ಳುವ ಮೂಲಕ, ಉಣ್ಣೆಗಳಿಂದ ರಕ್ಷಣೆ ಪಡೆಯುವಂತೆ ಸೂಚಿಸಿದ್ದಾರೆ. ಒಂದು ಬಾರಿ ಈ ಎಣ್ಣೆ ಮೈಗೆ ಹಾಕಿಕೊಂಡರೆ ಉಣ್ಣೆಯಿಂದ ನಾಲ್ಕು ಘಂಟೆ ರಕ್ಷಣೆ ಪಡೆಯಬಹುದು.ಜೊತೆಗೆ ಕಾಡಿಗೆ ಹೋಗುವ ಜನರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದ್ದು ಸಣ್ಣ ಸೂಚನೆ ಕಂಡುಬಂದರೂ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

Leave a Reply

Your email address will not be published. Required fields are marked *