ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಹಣಗೆರೆ ಗ್ರಾಂ ಪಂ ವ್ಯಾಪ್ತಿಯ ಬಸವನಗದ್ದೆ ಸಮೀಪದ ಶಿರನಲ್ಲಿ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಹೊಂಡ ತೆಗೆದು ಕಳಪೆ ಕಾಮಗಾರಿ ಹಿನ್ನಲೆಯಲ್ಲಿ ತೀರ್ಥಹಳ್ಳಿ – ಹಣಗೆರೆ – ಶಿವಮೊಗ್ಗಕ್ಕೆ ಹಾದು ಹೋಗುವ ಮುಖ್ಯ ರಸ್ತೆ ಅರ್ಧಕರ್ದ ಬಿರುಕು ಬಿಟ್ಟಿದ್ದು ವಾಹನ ಸವಾರರು ವಾಹನ ಚಲಿಸಲು ಭಯಭೀತರಾಗಿದ್ದಾರೆ.

ಆಯನೂರ್ – ಮಾಳೂರು ಮುಖ್ಯ ರಸ್ತೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ವೇಳೆ ರಸ್ತೆ ಬದಿಯಲ್ಲಿ ದೊಡ್ಡದಾದ ಟ್ರೆಂಚ್ ಗಳನ್ನು ಹೊಡೆದಿದ್ದು ಜುಲೈ 22 ರ ಸಂಜೆ 6 ಗಂಟೆಯ ಹೊತ್ತಿಗೆ ರಸ್ತೆ ಕುಸಿದಿದ್ದು. ಹಣಗೆರೆ ಗ್ರಾಮ ಪಂಚಾಯತಿ ಸಿಬ್ಬಂದಿ ಮಣಿಕಂಠ ಎಸ್ ಡಿ ತಕ್ಷಣ ಪಿ ಡಿ ಓ ಅಧಿಕಾರಿ & ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಕರೆ ಮಾಡಿ ತಿಳಿಸಿ

Oplus_131072

ಲ್ಲಿ ತಕ್ಷಣ ಬ್ಯಾರಿಕೆಡ್ ಹಾಕಲಾಯಿತು.ಈ ಬಗ್ಗೆ ಮೌನ ವಹಿಸಿರುವ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ತೀರ್ಥ ಹಳ್ಳಿ ಶಾಸಕ ರಾದ ಆರಗ ಜ್ಞಾನೇಂದ್ರರಿಗೆ ಸ್ಥಳೀಯರು ಅಕ್ರೋಶ ಹೊರ ಹಾಕಿದ್ದಾರೆ. ತಕ್ಷಣ ಸ್ಪಂದಿಸಿ ರಸ್ತೆ ಸರಿ ಪಡಿಸಲು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *