
ಶಿವಮೊಗ್ಗ : ಜಿಲ್ಲೆಯ ಹಲವಾರು ದೇವಸ್ಥಾನದಲ್ಲಿ ತಾಳಿ ಕಡಿಯುತ್ತಿದ್ದ ಖತರ್ನಾಕ್ ಕಳ್ಳ ಇದೀಗ ಪೋಲೀಸರ ಅತಿಥಿ ಯಾಗಿದ್ದಾನೆ. ಈ ಪ್ರಕರಣ ಸಲುವಾಗಿ ಹಲವರು ಪ್ರಕರಣ ದಾಖಲು ಮಾಡಿದ್ದ ಹಿನ್ನಲೆಯಲ್ಲಿ ಮಾಳೂರು ಪೊಲೀಸರು ಶೋಧನೆ ಶುರು ಮಾಡಿದ್ದು

ಇದೀಗ ಸವಳಂಗದ ಕಳ್ಳ ಸಂದೀಪ(22) ಸಿಕ್ಕಿಬಿದ್ದಿದ್ದು ಅವನಿಂದ 6 ದೇವರ ಚಿನ್ನದ ತಾಳಿ, 5ಚಿನ್ನದ ಗುಂಡು,ಒಂದು ಮೂಗುತಿ ಕೃತ್ಯಕ್ಕೆ ಬಳಸಿದ 2 ಓಮಿನಿ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಡಿ ವೈ ಎಸ್ ಪಿ ಅರವಿಂದ ಕಲಗುಚ್ಚಿಯವರ

ಮಾರ್ಗದರ್ಶನ ದಲ್ಲಿ ಸಿ ಪಿ ಐ ಇಮ್ರಾನ್ ಬೇಗ್, ಪಿ ಎಸ್ ಐ ಕುಮಾರ್, ಪಿ ಎಸ್ ಐ ಶಿವಾನಂದ ಧಾರೆನ್ನವರ, ಹೆಚ್ ಸಿ ಸುರಕ್ಷಿತ್, ಪಿ ಸಿ ಸಂತೋಷ್ ಕುಮಾರ್, ಪಿ ಸಿ ವಿಕ್ರಂ,ಪಿ ಸಿ ಪುನೀತ್ ಇದ್ದರು.

