• ಸತ್ಯಶೋಧ ವರದಿ ಫಲಶ್ರುತಿ
  • ರಾಜಕೀಯ ನಾಯಕರ ಭೇಟಿ ಮನವೊಲಿಕೆ ಯಶಸ್ವಿ

ಶಿವಮೊಗ್ಗ : ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕು ಆಗಂಬೆ ಹೋಬಳಿ ಬಾಳೆಹಳ್ಳಿ ಗ್ರಾಮದ ಮಜರೇ ಉಳುಮಡಿ ಅತ್ಯಂತ ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು ಮೂಲ ಸೌಲಭ್ಯಗಳಾದ ರಸ್ತೆ,ನೀರು,ವಿದ್ಯುತ್ ಸೌಲಭ್ಯಗಳಿಂದ ಹಲವಾರು ವರ್ಷಗಳಿಂದ ವಂಚಿತರಾಗಿದ್ದು, ಈ ಸಮಸ್ಯೆಯನ್ನು ನಿವಾರಣೆ ಮಾಡಲು ಸರ್ಕಾರವಾಗಲಿ ಯಾವುದೇ ರಾಜಕೀಯ ಪಕ್ಷಗಳಾಗಲಿ ಜನಪದ ನದಿಗಳಾಗಲಿ ಪೂರಕವಾಗಿ ಸ್ಪಂದಿಸದೆ ಇದ್ದ ಕಾರಣ 2024ನೇ ಮೇ ಏಳರಂದು ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆಗೆ ಮತದಾನ ಬಹಿಷ್ಕಾರ ಘೋಷಣೆ ಮಾಡಿದ್ದು ಈ ಸಂಬಂಧ ಸತ್ಯಶೋಧ ಮಾಧ್ಯಮ ವರದಿ ಮಾಡಿತ್ತು ಇದೀಗ ತೀರ್ಥಳ್ಳಿ ತಾಲೂಕು ತಹಶೀಲ್ದಾರ್, ಸಹಾಯಕ ಕಾರ್ಯನಿರ್ವಕ ಇಂಜಿನಿಯರ್ ಮೆಸ್ಕಾಂ ತೀರ್ಥಳ್ಳಿ ಉಪ ವಿಭಾಗ,ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯಿತಿ ತೀರ್ಥಹಳ್ಳಿ ಹಾಗೂ ಸ್ಥಳೀಯ ಅಧಿಕಾರಿಗಳು ಮತ್ತು ತೀರ್ಥಳ್ಳಿ ತಾಲೂಕು ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಭಾರತೀಯ ಜನತಾ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಮಾಜಿ ಶಾಸಕರು ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ , ಶೃಂಗೇರಿ ಕ್ಷೇತ್ರದ ವಿಧಾನಸಭಾ ಸದಸ್ಯ ರಾಜೇಗೌಡ, ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆರ್ ಎಮ್ ಮಂಜುನಾಥ್ ಗೌಡ ಹಾಗೂ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರುಗಳು ಭೇಟಿ ನೀಡಿ ಆಗುತ್ತಿರುವ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಂಡು ಈ ಸಮಸ್ಯೆಯನ್ನು ನಿರ್ವಹಣೆ ಮಾಡುವ ಬಗ್ಗೆ ಚುನಾವಣೆ ನಂತರ ತಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ್ದು ನಾವು ಚುನಾವಣಾ ಬಹಿಷ್ಕಾರವನ್ನು ಈ ಮೂಲಕ ಹಿಂದಕ್ಕೆ ಪಡೆದಿರುತ್ತೇವೆ ಎಂದು ಈ ಮೂಲಕ ತಿಳಿಸಿ ಕೊಡುತ್ತೇವೆ ಎಂದರು.

Leave a Reply

Your email address will not be published. Required fields are marked *