- ನಿಲ್ಲದ ಮಳೆ ನಡುವಲ್ಲಿ ಬಿಸಿಲು ಅನ್ನದಾತನಿಗಿಲ್ಲ ನಿಟ್ಟುಸಿರು

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಭತ್ತಕ್ಕೆ ಕಂದುಜಿಗಿ ಹುಳದ ಕಾಟದಿಂದ ರೈತರು ತತ್ತರಿಸಿ ಹೋಗಿದ್ದಾರೆ.ಒಂದೆಡೆ ತಾನು ಬೆಳೆದ ಬೆಳೆಗೆ ಕೀಟ ಬಾಧೆ ಶುರುವಾಗಿ ಮತ್ತೊಂದೆಡೆ ದೀಪಾವಳಿ ಶುರುವಾದರೂ ನಿಲ್ಲದ ವಿಪರೀತ ಮಳೆಗೆ ರೈತ ಬೇಸತ್ತಿದಂತೂ ಸತ್ಯ.ಬಿಸಿಲು ಮಳೆ ಕಾರಣದಿಂದ ಮಲೆನಾಡಿನ ಸಾವಿರಾರು ರೈತರ ಭತ್ತದ ಪಸಲು ಕಂದು ಜಿಗಿ ಹುಳು ಕಾಟಕ್ಕೆ ತುತ್ತಾಗಿದೆ ಶಿವಮೊಗ್ಗ ಜಿಲ್ಲೆಯ ಕೆಲವು ತಾಲೂಕಿನಲ್ಲಿ ಈ ಭಾದೆ ವಿಪರೀತವಾಗಿದೆ.

ಈ ಸಂಬಂಧ ಸತ್ಯಶೋಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತೀರ್ಥಹಳ್ಳಿ ಸಹಾಯಕ ಕೃಷಿ ಅಧಿಕಾರಿಗಳಾದ ಪ್ರವೀಣ್ “ಹಳೆ ತಳಿ ಅಂದರೆ ಐ ಟಿ ತಳಿಗಳನ್ನು ಸಾಮಾನ್ಯವಾಗಿ ತೀರ್ಥಹಳ್ಳಿಯ ಆಗುಂಬೆ ಭಾಗದಲ್ಲಿ ಬೆಳೆಯುತ್ತಾರೆ ಅದಕ್ಕೆ ಕಂದು ಜಿಗಿ ಹುಳು ಭಾದೆ ಕಡಿಮೆ, ಇನ್ನು ಹಣಗೆರೆ ಹಾಗೂ ಮಂಡಗದ್ದೆ ಭಾಗದಲ್ಲಿ ರೈತರು ಹೈ ಬ್ರೀಡ್ ತಳಿ ಬಳಸುತ್ತಾರೆ ಅವುಗಳಿಗೆ ಹುಳಗಳು ಭಾದಿಸೋದು ಜಾಸ್ತಿ ಈ ಕಾರಣಕ್ಕೆ ನಾವು ವಿಜ್ಞಾನಿಗಳೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇವೆ ಜೊತೆಗೆ ತಡೆಗಟ್ಟಲು ಬೇಕಾಗುವ ಕೀಟ ನಾಶಕಗಳು ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿಯೊಂದಿಗೆ ವಿತರಣೆ ಮಾಡ್ತೀವಿ ರೈತರು ಇದರ ಸದುಪಯೋಗ ಪಡಿಸಿಕೊಳ್ಳಲಿ ಎಂದರು.ಇನ್ನು ಕಂದು ಜಿಗಿ ಹುಳು ಭಾದಿತ ಪ್ರದೇಶಗಳಿಗೆ ಶಾಸಕ ಆರಗ ಜ್ಞಾನೇಂದ್ರರೊಂದಿಗೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ಭೇಟಿ ನೀಡಿದ್ದು, ಸಮಸ್ಯೆ ಉಲ್ಬಣವಾಗದಂತೆ ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.



