
ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಸುಳುಗೋಡು – ಯಡೂರಿನ ವಿ ಟಿ ಗ್ರೌಂಡ್ ನಲ್ಲಿ ಯಡೂರ್ ಕ್ರಿಕೆಟ್ ಲೀಗ್ ನ 7ನೇ ಅವೃತ್ತಿ ಆರಂಭವಾಗಿದೆ. ಮೊದಲ ದಿನದ ಕಾರ್ಯಕ್ರಮವನ್ನ ರಣಜಿ ಆಟಗಾರರಾದ ಶರತ್ ಶ್ರೀನಿವಾಸ್ ವಿನೂತನವಾಗಿ ಉದ್ಘಾಟನೆ ಮಾಡಿದರು .

ಸತತವಾಗಿ 6 ಸೀಸನ್ ತನಕವು ಅತ್ಯುತ್ತಮವಾಗಿ ಆಯೋಜಕರ ತಂಡ ವಿಭಿನ್ನವಾಗಿ ನಡೆಸಿಕೊಂಡು ಬರುತಿದ್ದು ಪ್ರಸಕ್ತ ವರ್ಷವು ಕೂಡ ಆಟದ ಜೊತೆಗೆ ಮ್ಯೂಸಿಕಲ್ ನೈಟ್,ಸಮಾಜ ಸೇವೆ, ಸಾಧಕರಿಗೆ ಸನ್ಮಾನ,ಪ್ರತಿ ಪಂದ್ಯಕ್ಕೆ 10 ಲಕ್ಷ ಪೋಸ್ಟಲ್ ಇನ್ಶೂರೆನ್ಸ್, ಯೌಟ್ಯೂಬ್ ಲೈವ್ ಹೀಗೆ ಹಲವಾರು ವಿಭಿನ್ನ ಪ್ರಯತ್ನದ ಮೂಲಕ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಒಟ್ಟಾರೆಯಾಗಿ ಹತ್ತು ತಂಡಗಳ ನೇರ ಹಣಾಹಣಿ ನಡೆಯಲಿದ್ದು ಈ ಪಂದ್ಯಾವಳಿಯು ಕತ್ತಲೆಯಲ್ಲಿದ್ದ ರಾಜ್ಯಕ್ಕೆ ಬೆಳಕು ನೀಡಿದ ವರಾಹಿ ಮುಳುಗಡೆ ಸಂತ್ರಸ್ತರಿಗೆ ಗೌರವ ಸಮರ್ಪಣೆ ಮಾಡಲಾಗಿದೆ.

ಯಡೂರು ಕ್ರಿಕೆಟ್ ಹಬ್ಬಕ್ಕೆ ಸರ್ವರನ್ನು ಪ್ರೇಮ್ ಯಡೂರು, ಸುಂದ್ರೇಶ್ ಯಡೂರು ವಿನಯ್ ಯಡೂರು, ಟೀಮ್ ವೈಸಿಎಲ್ ಹಾಗೂ ಸಮಸ್ತ ಯಡೂರು – ಸುಳುಗೋಡು ಗ್ರಾಮಸ್ಥರು ಆದರದಿಂದ ಸ್ವಾಗತಿಸಿದ್ದಾರೆ.



