Oplus_131072
Oplus_131072

ಶಿವಮೊಗ್ಗ: ಜಿಲ್ಲೆಯ ಹಣಗೆರೆಕಟ್ಟೆಯ ಲಾಡ್ಜ್‌ನಲ್ಲಿ ಏಪ್ರಿಲ್ 04 ರಂದು ಶಿವಮೊಗ್ಗದ ಬಾಪೂಜಿ ನಗರದ ಉಮಾ ಎಂಬ ಯುವತಿಯ ಕೊಲೆ ನಡೆದಿದ್ದು, ಆರೋಪಿಯನ್ನ ಮಾಳೂರು ಪೊಲೀಸ್‌ ಠಾಣೆಯ ಪೊಲೀಸರು ಬರೋಬ್ಬರಿ 8 ತಿಂಗಳ ಬಳಿಕ ಬಂಧಿಸಿದ್ದಾರೆ.ಆರೋಪಿ ತಮ್ಮನ ಅರೋಗ್ಯ ವಿಚಾರಿಸಲು ಬಂದಾಗ ಸಿಕ್ಕಿಹಾಕಿಕೊಂಡಿದ್ದಾನೆ. ಆರೋಪಿ ವೆಂಕಟೇಶ್ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಪತ್ತೆ ಮಾಡಿರುವ ಮಾಳೂರು ಪೊಲೀಸರು ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.ಇನ್ನು ಮಾಳೂರು ಪೋಲೀಸರ ಅದ್ಭುತ ಕಾರ್ಯಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *