ಶಿವಮೊಗ್ಗ : ಮದುವೆ ವಿಚಾರದಲ್ಲಿ ಮನಸ್ತಾಪ ಹಿನ್ನಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಇಬ್ಬರು ಯುವಕರಿಗೆ ಮಾರಕಾಸ್ತ್ರದಿಂದ ಇರಿಯಲಾಗಿದ್ದು . ಗಂಭೀರ ಗಾಯಗೊಂಡಿರುವ ಯುವಕರನ್ನು ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಏನಿದು ಘಟನೆ ಶಬ್ಬೀರ್‌ನ ಸಹೋದರಿ ಮತ್ತು ಫಾರ್ದಿನ್‌ ಪ್ರೀತಿಸಿ ಕೆಲವು ವರ್ಷದ ಹಿಂದೆ ವಿವಾಹವಾಗಿದ್ದರು. ಕುಟುಂಬದವರಿಂದ ಈ ವಿಷಯಕ್ಕೆ ವಿರೋಧವಿತ್ತು. ಇದೇ ಹಿನ್ನಲೆಯಲ್ಲಿ ಶಬ್ಬೀರ್‌ನ ಸಹೋದರಿ ಮತ್ತು ಫಾರ್ದಿನ್‌ ಪ್ರತ್ಯೇಕವಾಗಿ ನೆಲೆಸಿದ್ದರು . ಈ ವಿಚಾರವಾಗಿ ಫಾರ್ದಿನ್‌ಗೆ ಶಬ್ಬೀರ್‌ ಮತ್ತು ಶಹಬಾಜ್‌ ಬೆದರಿಸುತ್ತಿದ್ದು ಈ ಘಟನೆ ಸಂಭವಿಸಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.ತುಂಗಾ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *