ಶಿವಮೊಗ್ಗ: ನಗರದ ಸೋಮಿನಕೊಪ್ಪ ಮೇಲ್ಸೇತುವೆ ಬಳಿ ಇಂದು ಮಧ್ಯಾಹ್ನ ರೈಲಿಗೆ ಸಿಲುಕಿ ವೃದ್ಧರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ವಿನೋಬನಗರದ ಕಲ್ಲಹಳ್ಳಿಯ ನಿವಾಸಿ ಈಶ್ವರಪ್ಪ (68) ಎಂದು ಗುರುತಿಸಲಾಗಿದೆ.ತಾಳಗುಪ್ಪ – ಶಿವಮೊಗ್ಗ ಪ್ಯಾಸೆಂಜರ್‌ ರೈಲಿಗೆ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.

ಘಟನೆಯಲ್ಲಿ ಈಶ್ವರಪ್ಪ ಅವರ ದೇಹ ಎರಡು ಭಾಗವಾಗಿ ಹಳಿಯ ಮೇಲೆ ಬಿದ್ದಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿವಮೊಗ್ಗ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *