

ತೀರ್ಥಹಳ್ಳಿ :ಡಾಕ್ಟರ್ಸ್ ಅಸೋಸಿಯೇಷನ್ ತೀರ್ಥಹಳ್ಳಿ ಇದರ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಸಾರ್ವಜನಿಕರಿಗಾಗಿ ಕೆಳಕಂಡ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮಗಳ ಸರಣಿಯಲ್ಲಿ ಮೊದಲ ಕಾರ್ಯಕ್ರಮವಾಗಿ ತೀರ್ಥಹಳ್ಳಿ ತಾಲೂಕಿನ ಆಶಾ ಕಾರ್ಯಕರ್ತೆಯರು, ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಮತ್ತು ಆಸಕ್ತ ನಾಗರೀಕರಿಗಾಗಿ ಕಾರ್ಡಿಯೋ

ಪಲ್ಮನರಿ ರಿಸಿಸಿಟೇಶನ್ (ಹೃದಯ ಅಥವಾ ಶ್ವಾಶಕೋಶ ಸ್ಥಂಬನವಾದಾಗ ನೀಡುವ ತುರ್ತುಚಿಕಿತ್ಸೆಯ) ತರಬೇತಿ ಕಾರ್ಯಕ್ರಮವನ್ನು ಹಾಗೂ ಮಂಗಳೂರಿನ ಯೇನಪೋಯ ಮೆಡಿಕಲ್ ಮತ್ತು ಡೆಂಟಲ್ ಕಾಲೇಜಿನ ವತಿಯಿಂದ ಸೀಳುಬಾಯಿ ಮತ್ತು ಸೀಳುಟಿ ಭಾದಿತರ ಪತ್ತೆ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಈ ಎಲ್ಲಾ ಕಾರ್ಯಕ್ರಮಗಳು ದಿ: 08-11-2025ರ ಶನಿವಾರ ಸ್ಥಳ : ಗೋಪಾಲಗೌಡ ರಂಗ ಮಂದಿರದಲ್ಲಿ ಮದ್ಯಾಹ್ನ 12 ಗಂಟೆಗೆ ನಡೆಯಲಿದೆ.
ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಸರಣಿ ಕಾರ್ಯಕ್ರಮಗಳ ಉದ್ಘಾಟನೆದಿನಾಂಕ: 08-11-2025 ಶನಿವಾರಸಮಯ: ಮಧ್ಯಾಹ್ನ 3:00 ಗಂಟೆಗೆ
ಸ್ಥಳ : ರೋಟರಿ ಐ.ಎಮ್.ಎ. ಬ್ಲಡ್ ಸೆಂಟರ್, ತೀರ್ಥಹಳ್ಳಿ ಬ್ಲಡ್ ಕಾಂಪೊನೆಂಟ್ಸ್ ಸೆಪರೇಶನ್ ಯೂನಿಟ್ಟಿನ ಉದ್ಘಾಟನೆ: 08-11-20250 : 1 4:00

ಸ್ಥಳ : ಗೋಪಾಲಗೌಡ ರಂಗ ಮಂದಿರ, ತೀರ್ಥಹಳ್ಳಿ ಸಾರ್ವಜನಿಕ ಸಮಾರಂಭ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸುಸ್ವಾಗತವನ್ನು ಡಾಕ್ಟರ್ಸ್ ಅಸೋಸಿಯೇಷನ್, ತೀರ್ಥಹಳ್ಳಿ ಸತ್ಯಶೋಧ ನ್ಯೂಸ್ ಮೂಲಕ ತಿಳಿಸಿದೆ.

