Oplus_131072

ತೀರ್ಥಹಳ್ಳಿ : ಇಂಡಿಯಾ ಪಾಕಿಸ್ತಾನ ಯುದ್ಧ ಶುರುವಾಗಿದ್ದು, ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಉಗ್ರರನ್ನು ಹಾಗೂ ಅವರು ಅಡಗಿ ಕುಳಿತ 09 ಪ್ರದೇಶಗಳನ್ನು ಬಗ್ಗು ಬಡಿದು ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಳಿಸಿದೆ.ಜೊತೆಗೆ ಪಾಕಿಸ್ತಾನದ ಕ್ಷಿಪಣಿ ದಾಳಿಗೆ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿ ತಕ್ಕ ಉತ್ತರ ನೀಡಿದ್ದು ಎಲ್ಲೆಡೆ ನಮ್ಮ ಹೆಮ್ಮಯ ಸೈನಿಕರಿಗೆ ಮೆಚ್ಚುಗೆ ವ್ಯಕ್ತವಾಗಿದೆ.

Oplus_131072

ಇನ್ನು ಭಾರತೀಯ ಸೇನೆಗೆ ಒಳಿತಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆಯತೆ ರಾಜ್ಯದ್ಯಂತ ನಮ್ಮ ದೇಶ ಹಾಗೂ ನಮ್ಮ ಹೆಮ್ಮೆಯ ಸೈನಿಕರಿಗೆ ಶುಭವಾಗಲಿ ಎಂದು ಪೂಜೆ, ರುದ್ರಾಭಿಷೇಕ ನಡೆಸಿ ಹಾರೈಸಿದ್ದು ಅದರಂತೆ ತೀರ್ಥಹಳ್ಳಿ ಬಿಜೆಪಿ ಅಧ್ಯಕ್ಷ ಹೆದ್ದೂರ್ ನವೀನ್ ಅವರ ನೇತೃತ್ವದಲ್ಲಿ ಸುಪ್ರಸಿದ್ದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ನಡೆಸಿ ಯಾವುದೇ ಪ್ರಾಣ ಹಾನಿಯಾಗದೆ ವಿಜಯಶಾಲಿಯಾಗಿ ಗೆದ್ದು ಬರಲಿ ಎಂದು ಸೈನಿಕರಿಗೆ ಶುಭ ಹಾರೈಸಲಾಯಿತು. ಈ ವೇಳೆ ತೀರ್ಥಹಳ್ಳಿ ಬಿಜೆಪಿ ಮುಖಂಡರು ಭಕ್ತಾದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *