
ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಶ್ರೀ ಬಬ್ಬು ಸ್ವಾಮಿ ಸನ್ನಿಧಿ ಬಾವಿಕೇರಿ ಮೇಗರವಳ್ಳಿ ಬಳಗದ ವತಿಯಿಂದ 11ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪೂಜಾರಾಧನೆ ಅಂಗವಾಗಿ ದಿನಾಂಕ 08-01 2025 ಬುಧವಾರ ಮಧ್ಯಾಹ್ನ 3 -00 ಗಂಟೆಗೆ ಮಾಳಿಗೆ ಪೂರತಮ್ಮ ದೇವಿಯ ಮೆರವಣಿಗೆ ಹಾಗೂ ಅಯ್ಯಪ್ಪ ಸ್ವಾಮಿಯ ರಾಜಬೀದಿ ಉತ್ಸವವು ಮೇಗರವಳ್ಳಿಯ ಮುಖ್ಯಮಾರ್ಗದಲ್ಲಿ ನಡೆಯಲಿದೆ.

ಸನ್ನಿದಾನದಲ್ಲಿ ಶ್ರೀ ಸ್ವಾಮಿಗೆ ರಂಗ ಪೂಜೆ ಹಾಗೂ ಸ್ವಾಮಿಯ ವಿಶೇಷ ನೈವೇದ್ಯಕ್ಕಾಗಿ ಅಪ್ಪ ಸೇವೆ ಹಾಗೂ ಭಕ್ತಾದಿಗಳಿಗೆ ಲಘು ಉಪಹಾರ ವ್ಯವಸ್ಥೆ ಇರುತ್ತದೆ.

ದಿನಾಂಕ 10- 01-2025ರ ಶುಕ್ರವಾರ ಬೆಳಗ್ಗೆ 8:00 ಯಿಂದ ಜ್ಯೋತಿ ದರ್ಶನಕ್ಕೆ ಹೊರಡಲಿರುವ ಮಾಲಾಧಾರಿಗಳಿಗೆ ಇರುಮುಡಿ ಕಟ್ಟುವುದು, ಮಧ್ಯಾಹ್ನ 1 ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಇರುತ್ತದೆ.ಈ ಕಾರ್ಯಕ್ರಮದಲ್ಲಿ ಪಡಿಪೂಜೆ ಮಾಡಿಸಲು ಇಚ್ಚಿಸುವವರಿಗೆ ಅವಕಾಶವಿದೆ. ಹಾಗೂ ಸ್ವಾಮಿಯ ಕಾರ್ಯಕ್ರಮಗಳಿಗೆ ಹಣದ ರೂಪದಲ್ಲಿ ಸಂದಾಯ ಮಾಡಬಹುದು.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು – ಮನ -ಧನ ಸಹಾಯದಿಂದ ಸಹಕರಿಸಿ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಲು ಕೋರಿದೆ.

