– ಪ್ರತಿಮೆ ಅನಾವರಣ.ಎಲ್ಲಿ

ಪುರಾತನ ಸುಪ್ರಸಿದ್ದ ಕ್ಷೇತ್ರ ಎಂದು ಹೆಸರುವಾಸಿಯಾಗಿದ್ದ ಚಿಕ್ಕಮಗಳೂರಿನ ಶೃಂಗೇರಿ ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಶೃಂಗೇರಿಯ ಶಾರದಾ ಮಠದಿಂದ 2 ಕಿಲೋ ಮೀಟರ್ ದೂರದಲ್ಲಿರುವ ಮಾರುತಿ ಬೆಟ್ಟದಲ್ಲಿ ನಿರ್ಮಿಸಿರುವ ಆದಿ ಶಂಕರಾಚಾರ್ಯರ 32 ಅಡಿ ಎತ್ತರದ ಭವ್ಯ ಪ್ರತಿಮೆ ಅನಾವರಣಗೊಂಡಿದೆ.ಭಾರತೀ ತೀರ್ಥ ಮಹಾಸ್ವಾಮೀಜಿ ಮತ್ತು ವಿಧುಶೇಕಹರ ಭಾರತೀ ಮಹಾಸ್ವಾಮೀಜಿ ಈ ಪ್ರತಿಮೆಯನ್ನು ಉದ್ಘಾಟನೆ ಮಾಡಿದರು.ಉದ್ಘಾಟನೆ ಸಮಾರಂಭದಲ್ಲಿ ಭಾರತದ 10 ಮಂದಿ ವೇದಾಂತ ವಿದ್ವಾಂಸರಿಗೆ ತಲಾ 1 ಲಕ್ಷ ರೂ. ನಗದು ನೀಡಿ ಸನ್ಮಾನಿಸಲಾಯಿತು.