Oplus_131072
Oplus_131072

ಅಂತರಿಕ್ಷ ಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಕೊನೆಗೂ ತಮ್ಮ 286 ದಿನಗಳ ಸುಧೀರ್ಘ ಅಂತರಿಕ್ಷ ಪಯಣ ಮುಗಿಸಿ ಭೂಮಿಗೆ ಸು ಬೆಳಿಗ್ಗೆ 3.27ಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ.ಫ್ಲೋರಿಡಾ ಕರಾವಳಿಗೆ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಬಂದಿಳಿದರು ತಕ್ಷಣವೇ ಅವರನ್ನು ಹೊರಕರೆತರಲು ರಕ್ಷಣಾ ತಂಡ ಧಾವಿಸಿತು. ಮೊದಲು ಒಳಗಿದ್ದ ಗಗನಯಾತ್ರಿ ಸುರಕ್ಷಿತವಾಗಿದ್ದಾರೆಯೇ ಎಂದು ಪರಿಶೀಲಿಸಿದ ತಂಡ ಬಳಿಕ ಒಬ್ಬೊಬ್ಬರನ್ನಾಗಿ ಹೊರಕರೆತರಲು ವ್ಯವಸ್ಥೆ ಮಾಡಲಾಯಿತು.

ಎಲ್ಲರೂ ನಡೆಯಲೂ ಆಗದ ಸ್ಥಿತಿಯಲ್ಲಿದ್ದರು. ಹೀಗಾಗಿ ಎಲ್ಲಾ ಯಾತ್ರಿಗಳನ್ನೂ ಸ್ಟ್ರೆಚರ್ ನಲ್ಲಿ ಕೈ ಹಿಡಿದೆತ್ತಿ ಕೂರಿಸಿ ಕರೆದೊಯ್ಯಲಾಯಿತು. ಈ ವೇಳೆ ಎಲ್ಲಾ ಗಗನಯಾತ್ರಿಗಳು ಸಂಭ್ರಮದಿಂದ ಕೈ ಬೀಸಿ ತಮ್ಮ ಖುಷಿಯ ಸಂಭ್ರಮವನ್ನ ಹಂಚಿಕೊಂಡರು.ಸದ್ಯ ಇವರನ್ನು ವೈದ್ಯಕೀಯ ತಪಾಸಣೆಯಲ್ಲಿಡುವಂತೆ ವೈದ್ಯರು ತಿಳಿಸಿದ್ದಾರೆ. ಇವರಿಗೆ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ಎಂದು ನಾಸಾ ತಿಳಿಸಿದೆ.

Oplus_131072

ಸುನೀತಾ ವಿಲಿಯಮ್ಸ್ ಗೆ ಶುಭಾಶಯ ಕೋರಿ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡುವ ಮೂಲಕ ಸುನಿತಾ ಮತ್ತು ಅವರ ತಂಡಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಸ್ವಾಗತ, #Crew9! ಭೂಮಿ ನಿಮ್ಮನ್ನು ಬಹಳಷ್ಟು ಮಿಸ್ ಮಾಡಿಕೊಂಡಿತು ಎಂದು ಸುನಿತಾ ವಿಲಿಯಮ್ಸ್‌ ಜತೆಗಿನ ತಮ್ಮ ಫೊಟೋವನ್ನು ಶೇರ್‌ ಮಾಡುವ ಮೂಲಕ ಪೋಸ್ಟ್‌ ಮಾಡಿದ್ದಾರೆ.

Leave a Reply

Your email address will not be published. Required fields are marked *