
ಕರ್ನಾಟಕದ ಹೆಮ್ಮೆಯ ದಿನಪತ್ರಿಕೆ ವಿಜಯ ಕರ್ನಾಟಕ ಈ ವರ್ಷದ ಸೂಪರ್ ಸ್ಟಾರ್ ರೈತ ಪ್ರಶಸ್ತಿ 7ನೇ ಆವೃತ್ತಿಯನ್ನು ಮಾರ್ಚ್ 12 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಟಿ ಎ ಪಿ ಸಿ ಎಂ ಎಸ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ರೈತರಿಗೆ ಅಗತ್ಯವಿರುವ ತೋಟದ ಬಗ್ಗೆ ನಿರ್ವಹಣೆ ಬೆಲೆ ಚುಕ್ಕಿ ರೋಗ ನಿರ್ವಹಣೆ ಅಡಿಕೆ ಸಿಪ್ಪೆಯನ್ನು ಕಾಂಪೋಸ್ಟ್ ಮಾಡುವ ವಿಧಾನ ಹೇಗೆ ಹಲವಾರು ಕೃಷಿ ಹಾಗೂ ರೈತರ ನಡುವಿನ ಸಂಬಂಧವನ್ನು ತಿಳಿಸಿಕೊಡಲು ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ಮಾಹಿತಿ ನೀಡಲಿದ್ದಾರೆ.ಈ ವೇಳೆ ಕೃಷಿಯಲ್ಲಿ ಸಾಧನೆ ಮಾಡಿದ, ಎಲೆ ಮರೆಕಾಯಂತಿರುವ ರೈತರಿಗೆ ಸೂಪರ್ ಸ್ಟಾರ್ ರೈತ ಪ್ರಶಸ್ತಿ ನೀಡಿ ಗೌರವಿಸಲಿದೆ.

ಜೊತೆಗೆ ಈ ಕಾರ್ಯಕ್ರಮದಲ್ಲಿ ಹಲವಾರು ಸ್ಥಳೀಯ ಸಂಘ ಸಂಸ್ಥೆಗಳು,ಕೃಷಿ ಇಲಾಖೆ, ತೋಟಗಾರಿಕೆ,ರೇಷ್ಮೆ, ಪಶುಪಾಲನೆ, ಮೀನುಗಾರಿಕೆ, ಅರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದು ರೈತರಿಗೆ ಮಾಹಿತಿ ನೀಡಲಿದ್ದಾರೆ. ಈ ಸಂಬಂಧ ತಾಲೂಕಿನ ರೈತರಿಗೆ,ಸಾರ್ವಜನಿಕರು ಪಾಲ್ಗೊಂಡು ಕೃಷಿಯ ಬಗ್ಗೆ ಮಾಹಿತಿ ಪಡೆಯಲು ಉತ್ತಮ ವೇದಿಕೆಯಾಗಲಿದೆ.


