

ತೀರ್ಥಹಳ್ಳಿ :ಪಟ್ಟಣ ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಗೀತಾ ರಮೇಶ್ ಡಿ. 8 ರಂದು ಅಧಿಕಾರ ಸ್ವೀಕರಿಸಿದರು.ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಹಮತ್ ಉಲ್ಲಾ ಅಸಾದಿ ಅವರ ಸಮಯ ಮುಗಿದ ಹಿನ್ನಲೆ ಮುಂದಿನ ಅಧ್ಯಕ್ಷರ ಪ್ರಕ್ರಿಯೆ ನಡೆಯುವ ಮದ್ಯೆ ಎಳ್ಳಮಾವಾಸ್ಯೆ ಜಾತ್ರೆ ಇರುವುದರಿಂದ ಪ್ರಭಾರ ಅಧ್ಯಕ್ಷರನ್ನಾಗಿ ಗೀತಾ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ.ಈ ಸಂದರ್ಭದಲ್ಲಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೆಳಕೆರೆ ಪೂರ್ಣೇಶ್, ಪ.ಪಂ. ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಬಿ.ಗಣಪತಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವರಲಕ್ಷ್ಮಿ ವಿಲಿಯಂ ಮಾರ್ಟೀಸ್, ಅಮರನಾಥ್ ಶೆಟ್ಟಿ, ಕೇಳೂರು ಮಿತ್ರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


