ತೀರ್ಥಹಳ್ಳಿ : ಪಟ್ಟಣ ಪಂಚಾಯಿತಿಯ ಬಹು ನಿರೀಕ್ಷಿತ ಯೋಜನೆಗಲ್ಲಿ ಒಂದಾದ ಕುವೆಂಪು ಬಯಲು ರಂಗ ಮಂದಿರ ಸುಮಾರು 80 ಲಕ್ಷ ವೆಚ್ಚದಲ್ಲಿ ತಯಾರಾಗುತ್ತಿದ್ದು ಈ ದಿನ ಟೆಂಡರ್ ಕರೆಯಲಾಗಿದೆ.ಜೊತೆಗೆ ವಿವಿಧ ವಾರ್ಡ್ ಗಳ ಅಭಿವೃದ್ಧಿ ಕಾಮಗಾರಿಗೆ ಒಂದು ಕೋಟಿ ಇಪ್ಪತ್ತು ಲಕ್ಷ ಟೆಂಡರ್ ಕರೆದಿದ್ದು,

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ-1999 ಮತ್ತು ಕೆ.ಟಿ.ಪಿ.ಪಿ ನಿಯಮಗಳು 2000ಕ್ಕೆ ಅನುಗುಣವಾಗಿ, ಇ-ಪ್ರಕ್ಯೂರ್ಮೆಂಟ್ ಪೋರ್ಟಲ್ ಮೂಲಕ 2025-26ನೇ ಸಾಲಿನ ವಿವಿಧ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿದೆ.

ಅಧಿಕೃತ ಮತ್ತು ಲೋಕೋಪಯೋಗಿ ಸಿವಿಲ್ ಇಲಾಖೆಯಲ್ಲಿ ನೊಂದಾಯಿಸಲ್ಪಟ್ಟ ಗುತ್ತಿಗೆದಾರರು 10/10/2025 ರಂದು ಸಂಜೆ 5:30 ರವರೆಗೆ Karnataka Public Procurement Portal ಮೂಲಕ ಅರ್ಜಿ ಸಲ್ಲಿಸಬಹುದು.

Leave a Reply

Your email address will not be published. Required fields are marked *