Oplus_131072

ತೀರ್ಥಹಳ್ಳಿ : ಏಕಾಏಕಿ ಮುಖ್ಯ ರಸ್ತೆಗೆ ಬೈಕ್ ಚಲಾಯಿಸಿಕೊಂಡು ಬಂದ ವಿದ್ಯಾರ್ಥಿಯೊಬ್ಬ ಬಸ್ ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ಘಟನೆ ಬೆಜ್ಜವಳ್ಳಿ ಸರ್ಕಲ್ ನಲ್ಲಿ ನಡೆದಿದೆ.ಶುಕ್ರವಾರ ಬೆಳಗ್ಗೆ ಬೆಜ್ಜವಳ್ಳಿ ಸಮೀಪದ ತನಿಕಲ್, ಕೌಟ್ ಮನೆ ನಿವಾಸಿ ಪ್ರಥಮ್ 16 ವರ್ಷ ಡಿಪ್ಲೊಮೊ ಸ್ಟೂಡೆಂಟ್ ಆಗಿದ್ದು ಕಾಲೇಜಿಗೆ ತೆರಳುವ ವೇಳೆ ಏಕಾಏಕಿ ತೀರ್ಥಹಳ್ಳಿ – ಶಿವಮೊಗ್ಗ ಮುಖ್ಯ ರಸ್ತೆಗೆ ಬಂದಿದ್ದಾನೆ. ಈ ವೇಳೆ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಥಮ್ ಪ್ರೆಜ್ಞೆ ತಪ್ಪಿದ್ದಾನೆ.ಮಣಿಪಾಲ ಆಸ್ಪತ್ರೆಗೆ ರವಾನಿಸುವ ಮಾರ್ಗ ಮದ್ಯೆ ಆಗುಂಬೆ ಬಳಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Oplus_131072

Leave a Reply

Your email address will not be published. Required fields are marked *