
ತೀರ್ಥಹಳ್ಳಿ : ದಿನಾಂಕ:-23-02-2025 ರಂದು ಬೆಳಗ್ಗೆ 10-15 ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ ಪಿರ್ಯಾದಿದಾರರು 15ವರ್ಷಗಳಿಂದ ಕೂಲಿ ಕೆಲಸಕ್ಕಾಗಿ ತೀರ್ಥಹಳ್ಳಿಗೆ ಬಂದಿದ್ದು, ತಾಲೂಕಿನ ಮೇಳಿಗೆ ಸಮೀಪದ ಹೊನ್ನೇಕಣದಲ್ಲಿ, ಟೆಂಟ್ ಹಾಕಿಕೊಂಡು ಸಂಸಾರದೊಂದಿಗೆ ವಾಸವಾಗಿದ್ದು, ಈ 9 ದಿನದ ಹಿಂದೆ ಮೇಳಿಗೆಯಲ್ಲಿ ನಡೆದ ವೆಂಕಟರಮಣ ದೇವಸ್ಥಾನದ ಜಾತ್ರೆಯಿದ್ದು,

ಈ ಜಾತ್ರೆಗೆ ಪಿರ್ಯಾದಿದಾರರು ಹೋಗಿದ್ದು, ಒಬ್ಬ ವ್ಯಕ್ತಿ ಸಿಕ್ಕಿ , ನನ್ನ ಹತ್ತಿರ ಯಾವುದೇ ಹಣ ಇಲ್ಲ, ಹುಬ್ಬಳ್ಳಿಯಿಂದ ಬಂದಿರುತ್ತೇನೆ, ನನಗೇನಾದರೂ ಕೂಲಿ ಕೆಲಸ ಕೊಡಿಸಿ ಎಂದು ದುಂಬಾಲು ಬಿದ್ದು, ಪಿರ್ಯಾದಿ ಕೂಲಿ ಕೆಲಸ ಮಾಡುವನಾಗಿದ್ದರಿಂದ ಕರುಣೆಯಿಂದ ಪಿರ್ಯಾದಿ ಜೊತೆ ಟೆಂಟ್ ಗೆ ಕರೆದುಕೊಂಡು ಹೋಗಿದ್ದು, ಆತನ ಹೆಸರು ಕೇಳಲಾಗಿ ಮಂಜುನಾಥ ಎಂದು ಹೇಳಿದ್ದು, ಆತನು ಪಿರ್ಯಾದಿ ಜೊತೆಯಲ್ಲಿ, ಕೆಲಸ ಮಾಡಿಕೊಂಡು ಇದ್ದು, ಅವನ ಬೇರೆ ಯಾವುದೇ ಮಾಹಿತಿ ಪಡೆದುಕೊಂಡಿರುವುದಿಲ್ಲ.ದಿನಾಂಕ:-22-02-2025 ರಂದು ಬೆಳಿಗ್ಗೆ 7-30ಕ್ಕೆ ಮೇಳಿಗೆ ರಾಮಭಟ್ಟರ ತೋಟಕ್ಕೆ ಕೆಲಸಕ್ಕೆ ಹೋಗಿ ಸಂಜೆ 4-30ಕ್ಕೆ ವಾಪಾಸ್ ಟೆಂಟ್ ಗೆ ಬಂದಿದ್ದು, ಮಂಜುನಾಥನು ಸ್ನಾನ ಮಾಡಿ ಸಂಜೆ 9-00ಗಂಟೆಗೆ ಊಟ ಮಾಡಿ ಮಲಗಿದ್ದು, ಮಂಜುನಾಥನಿಗೆ ಪ್ರತಿ ದಿನ ಮದ್ಯಪಾನ ಮಾಡುವ ಅಭ್ಯಾಸ ಇರುತ್ತದೆ,

ದಿನಾಂಕ:-23-02-2025 ರ ಬೆಳಿಗೆ, 6-30 ಗಂಟೆಗೆ ಜೊತೆಯಲ್ಲಿ ಕೆಲಸ ಮಾಡುವ ಕರಿಬಸಪ್ಪ,ಅವರು ಮಂಜುನಾಥನನ್ನು ಎಬ್ಬಿಸಲು ಹೋದಾಗ, ಯಾವುದೇ ಪ್ರತಿಕ್ರಿಯೆ ಇಲ್ಲದೆ ಇದ್ದು, ಉಸಿರಾಟದ ಬಗ್ಗೆ ಪರಿಶೀಲಿಸಲಾಗಿ ಉಸಿರಾಡುತ್ತಿರಲಿಲ್ಲ. ಕರಿಬಸಪ್ಪನು ಪಿರ್ಯಾದಿಗೆ ಕೂಗಿಕರೆದಿದು, ಪಿರ್ಯಾದಿ ಹೋಗಿ ನೋಡಿದಾಗ ಮಂಜುನಾಥ ಮೃತಪಟ್ಟಿರುತ್ತಾನೆ.

ನಂತರ ಯಾವುದೋ ಒಂದು ವಾಹನದಲ್ಲಿ, ಮಂಜುನಾಥನ ಶವವನ್ನು ಮುಂದಿನ ಕ್ರಮಕ್ಕಾಗಿ ಎಸ್ ಜೆಸಿ ಆಸ್ಪತ್ರೆಗೆ ತಂದಿದ್ದು, ಮಂಜುನಾಥನು 5 ಅಡಿ ಎತ್ತರ, ಕೋಲುಮುಖ, ಕಪ್ಪು ಬಿಳಿ ಮಿಶ್ರಿತ 2 ಇಂಚು ಉದ್ದದ ತಲೆಕೂದಲು, ಕಪ್ಪು ಬಿಳಿ ಮಿಶ್ರಿತ ಮೀಸೆ, ಗಡ್ಡೆ ಸಾದಾರಣ ಮೈಕಟ್ಟು,ಎಣ್ಣೆ ಗೆಂಪು ಮೈ ಬಣ್ಣ, 32ವರ್ಷ ವಯಸ್ಸು, ಬಲಗೈಯಲ್ಲಿ ಸಮಬಿಲು, ಓಂ, ಹಾಗೂ ಭವಾನಿ, ಎಡಗೈಯಲ್ಲಿ, ಸರೋಜ ಅಂತ ಹಚ್ಚೆ ಗುರುತು ಇರುತ್ತದೆ. ಮಂಜುನಾಥನ ವಾರಸುದಾರರನ್ನು ಪತ್ತೆ ಮಾಡಿ ಮೃತನ ಶವದ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರನ್ನು ಇಲ್ಲಿ ಪ್ರಕಟಿಸಲಾಗಿದೆ. ವಾರಸುದಾರರು ಇದ್ದರೆ ತಕ್ಷಣವೇ ತೀರ್ಥಹಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.

