ಸಹಕಾರಿ ನಾಯಕನಿಗೆ ಒಲಿದ ಜವಾಬ್ದಾರಿ ಹುದ್ದೆ – ಹರ್ಷ ವ್ಯಕ್ತಪಡಿಸಿದ ಆರ್ ಎಂ ಅಭಿಮಾನಿ ಬಳಗ

ಶಿವಮೊಗ್ಗ: KMF (ಕರ್ನಾಟಕ ರಾಜ್ಯ ಹಾಲು ಮಹಾಮಂಡಲ )ನಿರ್ದೇಶಕರಾಗಿ ಮಂಜುನಾಥ ಗೌ ಅವರನ್ನು ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಆರ್ ಎಂ ಮಂಜುನಾಥ್ ಗೌಡರಿಗೆ ರಾಜ್ಯ ಸಹಕಾರ ಕ್ಷೇತ್ರದಲ್ಲಿ ಮತ್ತೊಂದು ದಿಟ್ಟ ಹೆಜ್ಜೆಯ ನಿಲುವು ಸಿಕ್ಕಿದಂತಾಗಿದೆ.

ಜೊತೆಗೆ ಶಿವಮೊಗ್ಗ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರು ರಾಜ್ಯ ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್ ಅವರು ಇಂದು ಬೆಂಗಳೂರಿನಲ್ಲಿ ಅಭಿನಂದಿಸಿದರು. ಇದೇ ವೇಳೆ ಡಾ. ಆರ್. ಎಂ. ಮಂಜುನಾಥ್ ಗೌಡರಿಗೆ ನಿರ್ದೇಶಕರಾಗಿ ಆಯ್ಕೆಯಾದ ನಂತರ ಗೌಡರ, ಅಭಿಮಾನಿಗಳು, ಅವರ ಆಪ್ತ ಬಳಗ ಅಭಿನಂದನೆ ಸಲ್ಲಿಸಿದ್ದಾರೆ.ಇನ್ನು ರಾಜ್ಯದ ಕೆಎಂಎಫ್ ನ 16 ಮಂದಿ ಸದಸ್ಯರಲ್ಲಿ ಮಂಜುನಾಥ್ ಗೌಡರು ಒಬ್ಬರಾಗಿದ್ದು,ಮಂಜುನಾಥ್ ಗೌಡರಿಂದ ಇನ್ನಷ್ಟು ಬದಲಾವಣೆಯಾಗಬಹುದು ಎಂಬುದು ಜನರ ಹಾಗೂ ಅಭಿಮಾನಿಗಳ ನಿರೀಕ್ಷೆಯಾಗಿದೆ.

Leave a Reply

Your email address will not be published. Required fields are marked *