- ಸಾವಿಗೆ ಅರಣ್ಯ ಇಲಾಖೆ ಕಾರಣ -ಸ್ಥಳೀಯರ ಅಕ್ರೋಶ

ತೀರ್ಥಹಳ್ಳಿ ತಾಲೂಕಿನ ಕೋಣಂದೂರು ದೇಮ್ಲಾಪುರ ಗ್ರಾಂ ಪಂ ವ್ಯಾಪ್ತಿಯ ತೊರೆಬೈಲು ಗ್ರಾಮದ ವ್ಯಕ್ತಿಯೊಬ್ಬರು ಗಾಳಿಯ ರಬಸಕ್ಕೆ ಮರ ಬಿದ್ದು ಮೃತಪಟ್ಟಿದ್ದಾರೆ.ಜಯಂತ್ ಭಟ್ (64 ವರ್ಷ ) ಕೋಣಂದೂರಿನಿಂದ ಮನೆಗೆ ಹೋಗುವಾಗ ಬಾರಿ ಗಾಳಿ ಮಳೆಗೆ ಅಕೇಶಿಯಾ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇನ್ನು ಇವರ ಸಾವು ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿತನ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.


