– ನ 19 ರಿಂದ ಭಕ್ತರ ಸೇವೆಯ ಆಟ ಶುರು – ಭಕ್ತರಿಗೆ ಹಾಗೂ ಯಕ್ಷಗಾನ ಪ್ರಿಯರಿಗೆ ಆತ್ಮೀಯ ಆಮಂತ್ರಣ

ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ದಿನಾಂಕ 18- 11 2023ನೇ ಶನಿವಾರ ಬೆಳಗ್ಗೆ 9 ಗಂಟೆಗೆ ಬಾರಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣ ಹೋಮ ನಡೆಯಲಿದ್ದು,ಮಧ್ಯಾಹ್ನ ಗಂಟೆ 12 ಕ್ಕೆ ಶ್ರೀ ಕ್ಷೇತ್ರಮಂದಾರ್ತಿಯಲ್ಲಿ ನಡೆಯುವ ಗಣ ಹೋಮ,ಐದು ಮೇಳಗಳ ಶ್ರೀ ಮಹಾ ಗಣಪತಿ ಪೂಜೆ ಹಾಗೂ ರಾತ್ರಿ ಜರುಗಳಿರುವ ಪ್ರಥಮ ದೇವರ ಸೇವೆ ಆಟಕ್ಕೂ ತಾವೆಲ್ಲರೂ ಆಗಮಿಸಲು ಹಾಗೂ ಶ್ರೀದೇವಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.

ಈ ಕಾರ್ಯಕ್ರಮಕ್ಕೆ ಶ್ರೀ ಮಂದಾರ್ತಿ ಅಮ್ಮನ ಭಕ್ತ ಅಭಿಮಾನಿಗಳು ಹಾಗೂ ಯಾಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಹಾಗೂ ಯಕ್ಷಸೇವೆಯನ್ನು ಚಂದಗಾಣಿಸಿ ಕೊಡಬೇಕಾಗಿ ವಿನಂತಿ.ಹಾಗೆಯೇ ಭಕ್ತರ ಹರಕೆ ಸೇವೆಯನ್ನು ನ 19-2023 ರಿಂದ ತಿರುಗಾಟ ಆರಂಭವಾಗಲಿದೆ.