
ಹೊಸನಗರ: ತಾಲೂಕಿನ ನಗರ ಹೋಬಳಿಯ ಯಡೂರ್ ಸಮೀಪದ ವರಾಹಿ ಡ್ಯಾಮ್ ನ ಉಳ್ತಿಗ (ಮೇಲ್ಸುಂಕ) ಎಂಬಲ್ಲಿ ಗಣೇಶ್ ಎಂಬ ವ್ಯಕ್ತಿ ಅನುಮಾನಾಸ್ಪದವಾಗಿ ಡ್ಯಾಮ್ ನ ನೀರಿನಲ್ಲಿ ಶವವಾಗಿ ಪತ್ತೆಯಾಗಿರುವುದು ಎಲ್ಲರಲ್ಲಿ ಅನುಮಾನವನ್ನು ಮೂಡಿಸಿದೆ.

ಒಂದು ವಾರಗಳ ಹಿಂದೆ ದಿನಾಂಕ 03/04/2025 ಗುರುವಾರ ದಂದು ಕಾಣೆಯಾಗಿದ್ದು ಅವರ ಪತ್ನಿ ಪೂರ್ಣಿಮಾ ಎಂಬುವವರು ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿತ್ತು. ಈ ವಿಚಾರವಾಗಿ ಊರಿನ ಜನರು ಒಟ್ಟಾಗಿ ಗಣೇಶ್ ಎಂಬ ವ್ಯಕ್ತಿ ಯ ಹುಡುಗಾಟವನ್ನು ಪ್ರಾರಂಭಿಸಿ ಒಂದು ವಾರಗಳ ವರಾಹಿ ಡ್ಯಾಮ್ ನ ಉಳ್ತಿಗ ಎಂಬಲ್ಲಿ ಶವವಾಗಿ ಪತ್ತೆಯಾಗಿದ್ದಾರೆ

ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಜಯಪುರ ಸಮೀಪ ದ ಗುಡ್ಡೇ ತೋಟದ (ಶಾಂತಿ ಗ್ರಾಮ) ಬಾಳೆಕೊಂಡದ ವ್ಯಕ್ತಿಯಾಗಿದ್ದು.ಈ ಪ್ರಕರಣದ ಸಂಭಂದವಾಗಿ ಸ್ಥಳಕ್ಕೆ ಧಾವಿಸಿದ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಪರಿಶೀಲಿಸಿ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ .



