- ಏನಿದು ಘಟನೆ ಸುದ್ದಿ ಓದಿ

ಮದುವೆ ವೈಷ್ಯಮ್ಯದ ಹಿನ್ನಲೆಯಲ್ಲಿ ಮನೆಯೊಂದರ ಕಾಂಪೌಂಡ್ ಒಳಗಡೆ ಗಾಂಜಾ ಎಸೆದು, ಹುಡುಗಿಯ ತಂದೆಯನ್ನು ಗಾಂಜಾ ಕೇಸಲ್ಲಿ ಸಿಕ್ಕಿ ಹಾಕಿಸಲು ಮಾಡಿದ ಪ್ಲಾನ್ ತಿರುಗುಬಾಣವಾಗಿ ಮೆಸ್ಕಾಂ ಇಂಜಿನಿಯರ್ ತಾನೇ ಬಂಧನಕ್ಕೆ ಒಳಗಾಗಿ ಜೈಲುಪಾಲಾಗಿರುವಂತ ಘಟನೆ ಸಾಗರದಲ್ಲಿ ನಡೆದಿದೆ.ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹುಲ್ಲತ್ತಿ ಗ್ರಾಮದ ಜತೇಂದ್ರ ರವರ ಮನೆಯ ಕಾಂಪೌಂಡ್ ಒಳಭಾಗದಲ್ಲಿ ದಿ:13-07-2024 ರಂದು ರಾತ್ರಿ ಸಮಯದಲ್ಲಿ ಯಾರೋ ಒಬ್ಬ ಅಸಾಮಿಯು ಗಾಂಜಾ ಪ್ಯಾಕೇಟ್ ಗಳನ್ನು ಹಾಕಿದ್ದು, ಈ ಕೃತ್ಯವನ್ನು ಶಾಂತಕುಮಾರ್ ಸ್ವಾಮಿ ಅವರು ಮಾಡಿರಬಹುದೆಂಬ ಅನುಮಾನ ಇರುವುದಾಗಿ ದೂರು ನೀಡಿರುತ್ತಾರೆ ಎಂದಿದೆ.ಎ.1 ಆರೋಪಿತನಾದ ಶಾಂತಕುಮಾರ್ ಮೇಲೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಸಿಆರ್ ನಂ 194/2023 ಕಲಂ 354,354(ಡಿ), 509, 465 ಐಪಿಸಿ, ಸಾಗರ ಪೇಟೆ ಠಾಣೆಯಲ್ಲಿ ಸಿಆರ್ ನಂ 110/2023 ಕಲಂ 323,354(ಬಿ),504,506 ಐಪಿಸಿ, ರೀತ್ಯಾ ದೂರು ದಾಖಲಾಗಿರುತ್ತದೆ ಎಂದು ತಿಳಿಸಿದೆ.ಈ ಆರೋಪಿತಗಳಿಂದ ಕೃತ್ಯಕ್ಕೆ ಬಳಸಿದ ಕೆಎ 18 ಎಂ 8303 ರ ಮಾರುತಿ 800 ಕಾರ್, ಒಂದು ವಿವೋ ಕಂಪನಿಯ ಮೊಬೈಲ್ ಫೋನ್, ಒಂದು ಪೆನ್ ಡ್ರೈವ್ ಅಮಾನತ್ತುಪಡಿಸಿಕೊಂಡು ಆರೋಪಿತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.


