- ಬಡವರಿಗೆ ದುಬಾರಿಯಾಯ್ತು ತರಕಾರಿ

ಅಧಿಕ ತಾಪಮಾನ, ಬರಗಾಲ, ನೀರಿನ ಸಮಸ್ಯೆ ಮೊದಲಾದ ಕಾರಣಗಳಿಂದ ತರಕಾರಿ ಬೆಳೆ ಮೇಲೆ ಪರಿಣಾಮ ಬೀರಿದ್ದು . ಹಲವೆಡೆ ಮಳೆಯಾಗಿದ್ದು, ಹೂವು ಉದುರಿದ್ದರಿಂದ ಬೀನ್ಸ್ ಉತ್ಪಾದನೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೆ, ಮದುವೆ, ಜಾತ್ರೆ, ಗೃಹಪ್ರವೇಶ, ಹಬ್ಬ, ಶುಭ ಸಮಾರಂಭಗಳ ಕಾರಣ ಬೀನ್ಸ್ ಗೆ ಬೇಡಿಕೆ ಹೆಚ್ಚಾಗಿದ್ದು. ಬೇಡಿಕೆಗೆ ತಕ್ಕಂತೆ ಬೀನ್ಸ್ ಪೂರೈಕೆಯಾಗದ ಹಿನ್ನೆಲೆಯಲ್ಲಿ 300 ರೂ. ಗಡಿ ದಾಟಿದೆ.ಸಾಗಾಣೆ ವೆಚ್ಚಕೂಡ ದುಬಾರಿಯಾದ ಹಿನ್ನಲೆ ಸ್ವಾಭಾವಿಕವಾಗಿಯೇ ಬೆಲೆ ಅಧಿಕವಾಗಿದೆ. ಇನ್ನು ಈರುಳ್ಳಿ, ಬೆಳುಳ್ಳಿ, ಶುಂಠಿ ಬೆಲೆಯಲ್ಲೂ ಕೂಡ ಹೆಚ್ಚಾಗಿದೆ. ನೂರು ರೂ.ಗೆ 5 ಕೆ.ಜಿ. ಸಿಗುತ್ತಿದ್ದ ನೀರುಳ್ಳಿ, 3 ಕೆ.ಜಿ.ಯಾಗಿದೆ. ಬೆಳ್ಳುಳ್ಳಿ ಕೂಡ ಅತ್ಯಂತ ದುಬಾರಿಯಾಗಿದೆ. ನಾಟಿ ಬೆಳ್ಳುಳ್ಳಿ 250 ರೂ. ದಾಟಿದೆ. ಶುಂಠಿಯ ಬೆಲೆಯಲ್ಲೂ ಕೂಡ ಹೆಚ್ಚಳವಾಗಿದೆ.ಕೋಸು, ಹಸಿಮೆಣಸಿನಕಾಯಿ, ನಿಂಬೆಹಣ್ಣು, ಬೀಟ್ರೋಟ್ ವಿವಿಧ ಸೊಪ್ಪುಗಳ ಬೆಲೆಗಳು ಕೂಡ ಬೆಲೆ ಏರಿಕೆಯಾಗಿದೆ.
ಮದ್ಯವರ್ತಿಗಳ ಹಾವಳಿ ಒಂದೆಡೆ ಹವಾಮಾನ ದಿನೇ ದಿನೇ ಬದಲಾವಣೆಯಾಗಿದ್ದು ಬಿಸಿಲು ಮಳೆಗೆ ತರಕಾರಿ ಬೆಲೆ ಜಾಸ್ತಿಯಾಗಿದೆ ಇನ್ನು ರೈತರು ಬೆಳೆದ ಬೆಳೆ ನೇರವಾಗಿ ಗ್ರಾಹಕರಿಗೆ ತಲುಪದೇ ಮದ್ಯವರ್ತಿಗಳ ಕೈ ಸೇರಿ ಬೆಳೆದ ಬೆಳೆಗೆ ನ್ಯಾಯದ ಬೆಲೆ ಸಿಗುತ್ತಿಲ್ಲ ಎಂಬುದು ರೈತರ ನೋವಾಗಿದ್ದು ಸರ್ಕಾರ ಕೂಡ ರೈತರ ಸಂಕಷ್ಟಕ್ಕೆ ಪರಿಹಾರ ಹುಡುಕುವುದು ಅನಿವಾರ್ಯವಾಗಿದೆ.
ರಾಜ್ಯದಲ್ಲಿ ತರಕಾರಿ ಬೆಲೆ ಏರಿಕೆಯಾಗಿದ್ದು ತರಕಾರಿ ರೈತರಿಗೆ ಕೈಗೆಟುಕದಾಗಿದೆ.ಈ ಮದ್ಯ ರೈತರು ಹಾಗೂ ಗ್ರಾಹಕರ ಮದ್ಯೆ ಮದ್ಯವರ್ತಿಗಳ ಹಾವಳಿಯಿಂದಾಗಿ ಬೆಳೆಗೆ ಸರಿಯಾದ ಮೌಲ್ಯ ಸಿಗುತ್ತಿಲ್ಲ ಈ ವಿಚಾರ ಅತ್ಯಂತ ಬೇಸರ ತಂದಿದೆ.ಆಡಳಿತ ಸರ್ಕಾರ ಈ ಬಗ್ಗೆ ಗಮನ ಹರಿಸಲಿ
– ಸುಶೀಲ ಪಿ ಶೆಟ್ಟಿ (ಪಟ್ಟಣ ಪಂಚಾಯಿತಿ ತೀರ್ಥಹಳ್ಳಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು)


