
ತೀರ್ಥಹಳ್ಳಿ : ಸುಮಾರು ಇಪ್ಪತ್ತಮೂರು ವರ್ಷಗಳಿಂದ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಮತ್ತು ಜನರಿಗೆ ಸ್ಥಳೀಯವಾಗಿಯೇ ಹಣಕಾಸು ಸಕಾಲಕ್ಕೆ ಒದಗಿಸಬೇಕೆಂಬ ದೂರ ದೃಷ್ಟಿ ಮತ್ತು ಅಚಲ ನಂಬಿಕೆಯಿಂದ ಪ್ರಾರಂಭಗೊಂಡ ಸಹ್ಯಾದ್ರಿ ವಿವಿದ್ದೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ಆಡಿಟ್ ವರದಿಯಲ್ಲಿ ಕಳೆದ ಸಾಲಿನಲ್ಲಿಯೂ ‘ಎ’ ಶ್ರೇಣಿಯನ್ನು ಪಡೆದುಕೊಂಡಿದ್ದು, ಜಿಲ್ಲೆಯಲ್ಲಿಯೇ ಒಂದು ಸಧೃಡ ಸಹಕಾರ ಸಂಘವಾಗಿ ಬೆಳೆದಿದ್ದು, ಆ ಕಾಲದಲ್ಲಿ ಈ ಸಂಘದ ಬಗ್ಗೆ ಅಸಡ್ಡೆಯಾಗಿ ಮಾತಾನಾಡಿದವರ ಎದುರು ದೂರದೃಷ್ಟಿ, ಶಿಸ್ತು ಬದ್ಧ ಆಡಳಿತ ನೀತಿ, ಕಠಿಣ ನಿಲುವು, ನಿರ್ದಾಕ್ಷಿಣ್ಯವಾಗಿ ಸಾಲ ವಸೂಲಾತಿ ಕ್ರಮದಿಂದ ಈ ಸಂಘವು ಪ್ರತಿ ವರ್ಷದಂತೆ ಈ ವರ್ಷವು 11 ಕೋಟಿ 64 ಲಕ್ಷದ 11 ಸಾವಿರದ 745 ರೂಪಾಯಿಗಳ ಲಾಭವನ್ನು ಗಳಿಸಿದ್ದು,

ರಾಜ್ಯದ ಗಮನವನ್ನು ತನ್ನತ್ತ ನೋಡುವಂತೆ ಮಾಡಿದೆಎಂದು ಬಸವಾನಿ ವಿಜಯದೇವ್ತಿಳಿಸಿದರು..ಸಹ್ಯಾದ್ರಿ ಸಂಸ್ಥೆಯ ಎಲ್ಲಾ ವಿಭಾಗದ ಒಟ್ಟು ವ್ಯವಹಾರವು 1475 ಕೋಟಿಗೂ ಅಧಿಕವಾಗಿದ್ದು, ಸಂಘವು ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸಬಲವಾಗಿರುವಂತೆ ಮಾಡಲು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಬೆಲೆ ಬಾಳುವ ನಿವೇಶನಗಳನ್ನು ಕೊಂಡುಕೊಂಡಿದ್ದು ಅವುಗಳ ಮಾರುಕಟ್ಟೆ ಮೌಲ್ಯವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲಿದೆ. ಸಂಸ್ಥೆಯ ಈ ಜಾಗಗಳ ಪ್ರಸಕ್ತ ಮಾರುಕಟ್ಟೆ ಮೌಲ್ಯವು ಸುಮಾರು 72 ಕೋಟಿಗೂ ಅಧಿಕವಾಗಿದೆ. ಅದರಂತೆ ಸಂಸ್ಥೆಯು ಗ್ರಾಹಕರ ಮೆಚ್ಚಿಗೆಯನ್ನುಗಳಿಸಿದ್ದು, ಸುಮಾರು 104 ಕೋಟಿ 54 ಲಕ್ಷದ ಠೇವಣಿಯನ್ನು ಹೊಂದಿದ್ದು, ತನ್ನ ವ್ಯವಹಾರದ ಕಾರ್ಯವ್ಯಾಪ್ತಿಯನ್ನು ಕಲಬುರಗಿ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿದೆ.

ಈಗಾಗಲೇ ಸುಮಾರು 140 ಕೋಟಿಗೂ ಅಧಿಕ ಸಾಲವನ್ನು ನೀಡಿದ್ದು, ಈ ವರ್ಷವೂ ಸಾಲ ವಸೂಲಾತಿ ವಿಷಯದಲ್ಲಿ ಶೇಕಡ 77% ಪ್ರಗತಿಯನ್ನು ಹೊಂದಿದೆ. ಅದರಂತೆ ಸಂಸ್ಥೆಯ ಮೇಲೆ ವಿಶ್ವಾಸವಿರುಸಿರುವ ಷೇರುದಾರ ಸದಸ್ಯರ ಹಿತವನ್ನು ದೃಷ್ಟಿಯಾಗಿರಿಸಿಕೊಂಡು ವಿವಿಧ ಕಡೆಗಳಲ್ಲಿ ಸುಮಾರು 48 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದ್ದು, ಪ್ರತಿ ವರ್ಷವೂ ಲಾಭವನ್ನು ಗಳಿಸುತ್ತ ತನ್ನ ಸದಸ್ಯರಿಗೆ ಲಾಭಾಂಶವನ್ನು ಹಂಚುತ್ತ ತನ್ನ ಹಿರಿಮೆಯನ್ನು ಉಳಿಸಿಕೊಂಡಿದೆ.

ಅಡಿಕೆ ವ್ಯವಹಾರದಲ್ಲಿ ರೂ.7.89 ಕೋಟಿ ಲಾಭಸಹ್ಯಾದ್ರಿ ಸಂಸ್ಥೆಯಲ್ಲಿ ಅಡಿಕೆ ವ್ಯವಹಾರವೇ ಉತ್ತಮ ಲಾಭವನ್ನು ತಂದು ಕೊಡುವ ಪ್ರಮುಖ ವ್ಯವಹಾರವಾಗಿರುತ್ತದೆ. ಸಂಸ್ಥೆಯಲ್ಲಿಸುಸರ್ಜಿತವಾದ ಗೋದಾಮುಗಳನ್ನು ಹೊಂದಿದ್ದು, ರೈತರ ಅಡಿಕೆ ಮೂಟೆಗಳನ್ನು ಸುರಕ್ಷಿತವಾಗಿ ಕಾಪಾಡಲಾಗುವುದು. ಉತ್ತಮಗುಣಮಟ್ಟದ ಸುಣ್ಣ, ಮೈಲು ತುತ್ತಾ, ರಾಳ ಹಾಗೂ ಕೃಷಿ ಉಪಯೋಗಿ ಔಷಧಿಗಳನ್ನು ಮಾರಾಟ ಕೂಡ ಮಾಡುತ್ತಿದೆ.ಒಟ್ಟಾರೆಯಾಗಿ ಅಡಿಕೆ ವ್ಯವಹಾರದಿಂದ ಬಂದ ಕಮೀಷನ್,ಔಷಧಿ ವ್ಯಾಪಾರದಿಂದ ಹಾಗೂ ಸಂಸ್ಥೆಯಿಂದ ಷೇರುದಾರರು ವಿವಿಧಉದ್ದೇಶಗಳಿಗಾಗಿ ಪಡೆದ ಸಾಲಗಳ ಮೇಲಿನ ಬಡ್ಡಿಯಿಂದ ಬಂದ ಲಾಭ ಅಂದಾಜು 7 ಕೋಟಿ 89 ಲಕ್ಷದ 35 ಸಾವಿರದ 577ರೂಪಾಯಿ.ಚೀಟಿನಿಧಿ ವಿಭಾಗದಲ್ಲಿ 3 ಕೋಟಿಗೂ ಅಧಿಕ ಲಾಭ2015 ರಲ್ಲಿ ಪ್ರಾರಂಭಗೊಂಡ ಸಹ್ಯಾದ್ರಿ ಚೀಟಿನಿಧಿಯು, ಷೇರುದಾರರು ಮತ್ತು ತನ್ನ ಎಲ್ಲಾ ಚಂದಾದಾರರ ವಿಶ್ವಾಸವನ್ನುಗಳಿಸಿ, ಸಂಸ್ಥೆಯ ಮತ್ತೊಂದು ಲಾಭಾ ತರುವ ವಿಭಾಗವಾಗಿ ಬೆಳೆದಿರುವುದು “ಸಹ್ಯಾದ್ರಿ ಚೀಟಿನಿಧಿ”. ಈಗಾಗಲೇ ಒಟ್ಟು 106 ಗುಂಪುಗಳನ್ನು ಪ್ರಾರಂಭಿಸಿದ್ದು, ಸುಮಾರು 4250 ಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದು, ಚೀಟಿನಿಧಿಯಲ್ಲಿ ತೊಡಗಿಸಿಕೊಂಡ ಮೇಲೆ ಮನೆಯ ಶುಭಕಾರ್ಯ, ಮಕ್ಕಳ ವಿದ್ಯಾಭ್ಯಾಸ, ಮದುವೆ, ಆಸ್ತಿ ಮತ್ತು ಇನ್ನಿತರ ಆರ್ಥಿಕ ವ್ಯವಹಾರಗಳಿಗೆ ಚಂದಾದಾರರಿಗೆ ಅನುಕೂಲವಾಗಿರುತ್ತದೆ.

ಒಟ್ಟಾರೆಯಾಗಿ ಈ ಸಾಲಿನಲ್ಲಿ ಸುಮಾರು 3 ಕೋಟಿ 12 ಲಕ್ಷದ 3 ಸಾವಿರದ 402 ರೂಪಾಯಿ ಅಧಿಕ ಲಾಭಂಶ ಗಳಿಸಿದೆ.ಸಹ್ಯಾದ್ರಿ ಪೆಟ್ರೋಲ್ ಬಂಕ್ ನಲ್ಲಿ 40 ಲಕ್ಷಕ್ಕೂ ಅಧಿಕ ಲಾಭಸಹ್ಯಾದ್ರಿ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಇನ್ನೊಂದು ಹೆಗ್ಗಳಿಕೆ ಸಹ್ಯಾದ್ರಿ ಫ್ಯೂಯಲ್ಸ್ ತೀರ್ಥಹಳ್ಳಿ-ಶಿವಮೊಗ್ಗ ಬಸ್ನಿಲ್ದಾಣದ ಬಳಿಯೇ ಇರುವ ಸಹ್ಯಾದ್ರಿ ಪೆಟ್ರೋಲ್ ಬಂಕ್ ಗ್ರಾಹಕರಿಗೆ ದಿನದ 24 ಗಂಟೆಯ ಉತ್ತಮ ಸೇವೆಯ ಜೊತೆಗೆಗುಣಮಟ್ಟದ ಪೆಟ್ರೋಲ್, ಡಿಸೇಲ್ ಮತ್ತು ಆಯಿಲ್ ಒದಗಿಸುತ್ತಿದ್ದು, ಗ್ರಾಹಕರು ಈ ಬಂಕ್ ಬಗ್ಗೆ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿನಲ್ಲಿ ಪೆಟ್ರೋಲ್ ಬಂಕ್ 40 ಲಕ್ಷದ 33 ಸಾವಿರದ 715 ರೂಪಾಯಿ ಲಾಭವಾಗಿರುತ್ತದೆ.ನಂದಿನಿ ಮಿಲ್ಕ್ ಪಾರ್ಲರ್ ಮತ್ತು ಎಮಿಷನ್ ಟೆಸ್ಟ್ 6.30 ಲಕ್ಷ ಲಾಭಸಹ್ಯಾದ್ರಿ ಪೆಟ್ರೋಲ್ ಬಂಕ್ ಆವರಣದಲ್ಲಿಯೇ ಪ್ರಾರಂಭವಾಗಿರುವ ಕೆ.ಎಂ.ಎಫ್ ಉತ್ಪನ್ನಗಳಾದ ತಾಜಾ ಹಾಲು,ಮೊಸರು,ತುಪ್ಪ, ಸಿಹಿ ತಿನಿಸುಗಳಾದ ಪೇಡ,ತಿಂಡಿ ತಿನಿಸುಗಳನ್ನು ದಿನದ 24 ಗಂಟೆಯೂ ಸೇವೆಯನ್ನು ಒದಗಿಸಲು ಮಳಿಗೆಯನ್ನು ಪ್ರಾರಂಭಿಸಿದ್ದು, ಈ ಸಾಲಿನಲ್ಲಿ ಒಟ್ಟು 6 ಲಕ್ಷದ 38 ಸಾವಿರದ 252 ರೂಪಾಯಿ ಲಾಭವನ್ನು ಗಳಿಸಿರುತ್ತದೆ.ಸರ್ವೋ ಇಂಡಿಯನ್ ಆಯಿಲ್ 7.70 ಲಕ್ಷ ಲಾಭದೇಶದ ಪ್ರತಿಷ್ಟಿತ ಸರ್ವೋ ಇಂಡಿಯನ್ ಆಯಿಲ್ ಸಂಸ್ಥೆಯು ತನ್ನ ಉತ್ಪಾದನೆಗೆ ಅಧಿಕ ಬೇಡಿಕೆ ಇರುವ ಕಾರಣ ಶಿವಮೊಗ್ಗ ಜಿಲ್ಲೆಗೆ ನೀಡುವ ಏಜೆನ್ಸಿಯನ್ನು ಸಹ್ಯಾದ್ರಿ ಸಂಸ್ಥೆಯು ಪಡೆದುಕೊಂಡಿದ್ದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ಗರಿ. ಗ್ರಾಹಕರಿಗೆ ಉತ್ತಮ ಆಯಿಲ್ ಒದಗಿಸುವಲ್ಲಿ ಸಂಸ್ಥೆಯು ಯಶಸ್ವಿಯಾಗಿದ್ದು

, ಈ ಸಾಲಿನಲ್ಲಿ 7 ಲಕ್ಷದ 71 ಸಾವಿರದ 319 ರೂಪಾಯಿಗಳ ಲಾಭವನ್ನ ಪಡೆದಿರುತ್ತದೆ.ಸಹ್ಯಾದ್ರಿ ವಾಟರ್ ಪ್ಲಾಂಟ್ 8.29 ಲಕ್ಷ ಲಾಭಸಂಸ್ಥೆಯ ಹೆಸರಿನಲ್ಲಿ ಶುದ್ಧ ಕುಡಿಯುವ ನೀರನ್ನು ಜನತೆಗೆ ಒದಗಿಸುವ ಸಲುವಾಗಿ ತೀರ್ಥಹಳ್ಳಿಯ ಬಾಳೇಬೈಲಿನಲ್ಲಿ ಘಟಕವನ್ನು ಕೊಂಡುಕೊಂಡು ಸಹ್ಯಾದ್ರಿ ಕುಡಿಯುವ ನೀರು ಎಂಬ ಹೆಸರಿನೊಂದಿಗೆ ವ್ಯವಹಾರವನ್ನು ನಡೆಸುತ್ತಿದ್ದು, ತಾಲ್ಲೂಕಿನಿಂದ ತಾಲ್ಲೂಕುಗಳಿಗೆ ಹಬ್ಬುತ್ತಿದ್ದು, ಸಹ್ಯಾದ್ರಿ ಕುಡಿಯುವ ನೀರಿಗೆ ಅಧಿಕ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಅದರಂತೆ ಈ ಸಾಲಿನ ತನ್ನ ವ್ಯವಹಾರದಲ್ಲಿ 8 ಲಕ್ಷದ 29 ಸಾವಿರದ 480 ರೂಪಾಯಿಗಳ ಲಾಭಾವನ್ನು ತನ್ನದಾಗಿಸಿಕೊಂಡಿದೆ.ಸಹಕಾರ ದನಿ ವಾರ ಪತ್ರಿಕೆ2011 ರ ಹೊತ್ತಿಗೆ ಪ್ರಾರಂಭಗೊಂಡ ಸಹಕಾರದನಿ ವಾರಪತ್ರಿಕೆ ಷೇರುದಾರರಿಗೆ ಸಂಸ್ಥೆಯ ಚಟುವಟಿಕೆ ಹಾಗೂ ರಾಜ್ಯದ ಇನ್ನಿತರೆಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತಿದ್ದು, ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನಗಳಿಸಿ ಹೆಮ್ಮೆಯ ವಾರಪತ್ರಿಕೆಯಾಗಿಹೊರಹೊಮ್ಮಿರುತ್ತದೆ. ಸಹ್ಯಾದ್ರಿ ಸಂಸ್ಥೆಯು ಜನರ ಮತ್ತು ಷೇರುದಾರರ ವಿಶ್ವಾಸ ಮತ್ತು ನಂಬಿಕೆಯಿಂದ ಈ ಬಾರಿ ನಿರೀಕ್ಷೆಗೂ ಮೀರಿ ಲಾಭಗಳಿಸಿದ್ದು, ಇದೆಲ್ಲವೂ ತನ್ನಿಂದಲೇ ಆಗಿದೆ ಎಂದು ಹೇಳಲಾರೆ, ನಮ್ಮ ಸಂಸ್ಥೆಗೆ ಮೊದಲಿನಂದಲೂ ಸಹಕಾರ ಮತ್ತು ಸಲಹೆಯನ್ನು ನೀಡುತ್ತಾ ಬಂದಿರುವ ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಅಪೆಕ್ಸ್ ಬ್ಯಾಂಕ್ ನಿರ್ದೇಶಕರು, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದಆರ್.ಎಮ್.ಮಂಜುನಾಥ

ಗೌಡರವರಿಗೆ, ನಮ್ಮ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರಿಗೂ, ಮಾಜಿ ಸಚಿವರಾದಕಿಮ್ಮನೆ ರತ್ನಾಕರ ರವರಿಗೂ, ಸಹಕಾರ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಹಾಗೂ ಡಿ.ಸಿ.ಸಿ ಬ್ಯಾಂಕ್ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಚಂದ್ರಕಲಾ ರವರ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸಂಸ್ಥೆ ತನ್ನದೆಂಬ ಭಾವನೆಯಿಂದ ಶ್ರಮವಹಿಸಿ ದುಡಿಯುತ್ತಿರುವ ಸಿಬ್ಬಂದಿ ವರ್ಗ ಹಾಗೂ ಸಕಾಲದಲ್ಲಿ ಸೂಕ್ತ ಸಲಹೆ ಸಹಕಾರವನ್ನು ನೀಡುತ್ತಿರುವ ಸಂಸ್ಥೆಯ ನಿರ್ದೇಶಕರುಗಳು ಕಾರಣಕರ್ತರಾಗಿರುತ್ತಾರೆ. ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ಇವರೆಲ್ಲರಿಗೂ ಕೃತಜ್ಞತೆ ಹಾಗೂ ಧನ್ಯವಾದಗಳನ್ನು ಅಧ್ಯಕ್ಷರು ತಿಳಿಸಿದರು. ಪ್ರತಿ ವರ್ಷದಂತೆ ಸಂಸ್ಥೆಯ ಆಡಿಟ್ ಮುಗಿದ ನಂತರ.ಪತ್ರಿಕಾಗೋಷ್ಠಿಯನ್ನು ಕರೆದು ಇನ್ನಷ್ಟು ಮಾಹಿತಿಯನ್ನು ನೀಡುವುದಾಗಿ ಹೇಳಿದ್ದಾರೆ. ಸಂಸ್ಥೆಯ ಭದ್ರತೆ ಮತ್ತು ಬದ್ಧತೆಯನ್ನು ಗಮನಿಸಿದ ಸುಮಾರು ಜನರು ಠೇವಣಿಯಿಡುತ್ತಿದ್ದು, ಅದರ ಜೊತೆಗೆ ಹಲವರು ಅಡಿಕೆ ವ್ಯವಹಾರ ನಡೆಸುತ್ತಿದ್ದು ಹಾಗೂ ಚೀಟಿನಿಧಿಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.

