ತೀರ್ಥಹಳ್ಳಿ :ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಚಿವರ ಪತ್ರಿಕಾಗೋಷ್ಠಿಯ ಸುದ್ದಿಯೊಂದಕ್ಕೆ ಪ್ರತಿಕ್ರಿಯಿಸುವ ಬರದಲ್ಲಿ ಮಾನ ಹಾನಿಕರವಾಗಿ ಮತ್ತು ಸಾಮಾಜಿಕ ತೇಜೋವಧೆ ಮಾಡುವ ಉದ್ದೇಶದಿಂದ ಜಾಲತಾಣವನ್ನು ಬಳಸಿಕೊಂಡಿರುವ ಗಣಪತಿ ಭಟ್ ವಿರುದ್ಧ ಕಾನೂನು ಕ್ರಮ ಜರುಗಿಸಲು ತೀರ್ಥಹಳ್ಳಿ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಲಾಗಿದೆ.

ದೂರಿನಲ್ಲೇನಿದೆ: ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್ ಖಾತೆಯಾದ “ನೆಲದ ಧ್ವನಿ” ತಾ 17.03.2026 ರ ದಿನ ಪತ್ರಿಕಾಗೋಷ್ಠಿಯನ್ನು ಮಾಜಿ ಶಿಕ್ಷಣ ಸಚಿವರು ಹಾಗೂ ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರವರ ಮಾತುಗಳನ್ನು ಪ್ರಚಾರಗೊಳಿಸಿದ್ದು ಸದರಿ ಪತ್ರಿಕಾಗೋಷ್ಠಿಯನ್ನು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಇನ್ನೂರಕ್ಕೂ ಹೆಚ್ಚು ಜನ ಪ್ರತಿಕ್ರಯಿಸಿದ್ದು ಆ ಪೈಕಿ ಗಣವು ಭಟ್ ಗಣಪತಿ (GANAPUU BHT GANPATI) ಎನ್ನುವ FB ಖಾತೆದಾರರು ಪ್ರತಿಕ್ರಿ ಸಿದ್ದು ಪ್ರತಿಕ್ರಿಯಿಸುವ ಬರದಲ್ಲಿ ಹೇ ಲೋಫರ್ ಬೆವರ್ಸಿ ಬೋಳಿಮಗನೇ ಮೋದಿ ಬಗ್ಗೆ ಮಾತಾಡಕ್ಕೆ ನಿಂಗೆ ಎನು ಯೋಗ್ಯತೆ ໖. ನೀನು ನಮ್ಮ ಕ್ಷೇತ್ರದಲ್ಲಿ ಎನು ಕಿಸ್ತಿದಿಯಾ ಸೂಳೆಮಗನೆ.” ಎಂದು ಉದ್ದೇಶಪೂರಕವಾಗಿನಮ್ಮ ನಾಯಕರಾದ ಕೆಪಿಸಿಸಿ ವತ್ತಾರರಾದ ಲಕ್ಷಾಂತರ ಜನ ಅಭಿಮಾನಿಗಳನ್ನು ಹೊಂದಿರುವ ಕಿಮ್ಮನೆ ರತ್ನಾಕರವರ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಮಾನಹಾನಿಕಾರಕವಾಗಿ ವಿಕೃತವಾಗಿ ಪ್ರತಿಕ್ರಯಿಸಿರುತ್ತಾರೆ. ಈ ಪ್ರತಿಕ್ರಿಯೆಯಿಂದಾಗಿ ತೀರ್ಥಹಳ್ಳಿ ಕ್ಷೇತ್ರದ ಹಾಗೂ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರಿಗೆ ಆಘಾತವಾಗಿದ್ದು, ಈ ವ್ಯಕ್ತಿಯ ವಿರುದ್ಧ (GANAPUU BHT GANPATI) ಕಾನೂನು ರೀತಿಯ ಕ್ರಮಕೈಗೊಂಡು ಸಾಮಾಜಿಕ ಜಾಲತಾಣದಲ್ಲಿ ಆ ವ್ಯಕ್ತಿಯು ನೀಡಿದ ಪ್ರತಿಕ್ರಿಯೆಯನ್ನು ಅಳಿಸಿ ಕಿಮ್ಮನೆ ರತ್ನಾಕರವರ ಅನುಯಾಯಿಯಾದ ನನಗೆ ನ್ಯಾಯ ಒದಗಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇನೆ. ಎಂದು ನೀಡಲಾಗಿದೆ.

Leave a Reply

Your email address will not be published. Required fields are marked *