ತೀರ್ಥಹಳ್ಳಿ : ತಾಲೂಕಿನ ಪ್ರಸಿದ್ಧ ಅಡುಗೆ ಗುತ್ತಿಗೆದಾರರಾದ ಗೋಪಾಲ ಕೃಷ್ಣ ಕೆ ಎಸ್ (ಗೋಪಿ)ಯವರಿಗೆ ಒರಿಯಂಟಲ್ ಫೌಂಡೇಶನ್ ವತಿಯಿಂದ ಕೊಡಮಾಡುವ ರಾಷ್ಟ ಪ್ರಶಸ್ತಿಗೆ ಆಯ್ಕೆಯಾಗಿದ್ದು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಇಲ್ಲಿ ಫೆ. 01 ರಂದು ಹೆಸರಂತ ಸ್ವಾಮೀಜಿಗಳು ಹಾಗೂ ಸಾಹಿತಿಗಳು, ಜೊತೆಗೆ ವಿವಿಧ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.

ಇನ್ನು ಗೋಪಿಯವರು ತೀರ್ಥಹಳ್ಳಿಯ ಪ್ರಸಿದ್ಧ ಆಡುಗೆ ಕಂಟ್ರಾಕ್ಟರಲ್ಲಿ ಒಬ್ಬರಾಗಿದ್ದು,ಸಮಾಜದ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು,ಜೊತೆಗೆ ಮಕ್ಕಳಿಗಾಗಿ ಉಚಿತ ಊಟದ ವ್ಯವಸ್ಥೆ,ಜೊತೆಗೆ ಬಡ ಕುಟುಂಬದಲ್ಲಿ ಸಾವಾಗಿದ್ದರೆ ಅವರ ವೈಕುಂಟ ಕಾರ್ಯಕ್ರಮಕ್ಕೆ ಅತೀ ರಿಯಾಯಿತಿ ದರದಲ್ಲಿ ಅಡುಗೆ ಮಾಡಿಕೊಡುವುದು ಇವರ ದೊಡ್ಡ ಗುಣ ಎಂಬುದು ಸ್ಥಳೀಯರಿಂದ ಕೂಡ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಗೆ ಪ್ರಶಸ್ತಿ ಸಿಕ್ಕಿದ್ದು ಅವರ ಆಪ್ತ ಬಳಗ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *