2025-26 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸಲು ಪ್ರತಿ ಹನಿಗೆ ಅಧಿಕ ಬೆಳೆ ಕಾರ್ಯಕ್ರಮದಡಿ ಸೂಕ್ಷ್ಮ ನೀರಾವರಿ ಪದ್ದತಿಯ ಹನಿ ಮತ್ತು ತುಂತುರು ನೀರಾವರಿ ಅಳವಡಿಕೆಗೆ 5 ಎಕರೆ ಪ್ರದೇಶಕ್ಕೆ ಶೇ 90 ರ ಸಹಾಯಧನವನ್ನು,5 ಎಕರೆ ಮೇಲ್ಪಟ ಪ್ರದೇಶಕ್ಕೆ ಶೇ 45 ರ ಸಹಾಯಧನದಂತೆ ಒಟ್ಟಾರೆ 12.50 ಎಕರೆ ಪ್ರದೇಶದವರೆಗೆ ಸಹಾಯಧನವನ್ನು ನೀಡಲು ಅವಕಾಶವಿದ್ದು,

ಆಸಕ್ತ ಎಲ್ಲಾ ವರ್ಗಗಳ ರೈತರು ಸೂಕ್ಷ್ಮ ನೀರಾವರಿ ಪದ್ದತಿ ಅಳವಡಿಸಿಕೊಳ್ಳಲು ಇಚ್ಚಿಸಿದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಕುಶಾವತಿಯಲ್ಲಿರುವ ತೋಟಗಾರಿಕೆ ಇಲಾಖೆ ಕಛೇರಿಯಲ್ಲಿ ದಿನಾಂಕ: 29-11-2025 ರೊಳಗಾಗಿ ಅರ್ಜಿಯನ್ನು ಸಲ್ಲಿಸಲು ಕೋರಿದೆ. ಈ ಯೋಜನೆಯಡಿ 7 ವರ್ಷಗಳ ಹಿಂದೆ ಸೂಕ್ಮ ನೀರಾವರಿ ಅಳವಡಿಸಿಕೊಂಡು ಸಹಾಯಧನವನ್ನು ಪಡೆದ ರೈತರೂ ಸಹ ಪುನಃ ಸೂಕ್ಷ್ಮ ನೀರಾವರಿ ಅಳವಡಿಸಿ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಸಹಾಯಧನ ಸೌಲಭ್ಯವನ್ನು ಮಾರ್ಗಸೂಚಿ ಹಾಗೂ ಅನುದಾನ ಲಭ್ಯತೆಯ ಅನುಸಾರ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಕುಶಾವತಿ, ತೀರ್ಥಹಳ್ಳಿ ಇಲ್ಲಿ ಸಂಪರ್ಕಿಸಲು ಅಥವಾ ಸಂಬಂದಿಸಿದ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಬಂದಪಟ್ಟ ಹೋಬಳಿಯ ಅಧಿಕಾರಿಗಳನ್ನು ಸಂಪರ್ಕಿಸುವುದು.ಕಸಬಾದಿನೇಶ ಟಿ ಕೆ9448751947,ಆಗುಂಬೆಮಧುಕರ ಕೆ ಎಲ್8296510018,ಅಗ್ರಹಾರಲಕ್ಷ್ಮೀಕಾಂತ್ ಕೆ ಹೆಚ್9482960857,ಮಂಡಗದ್ದೆಮನೋಹರ್ ಚಂದ್ರ ನಾಯ್ಕ9141656545,ಮುತ್ತೂರುಕಾವ್ಯ ಜಿ8277160164,ತೀರ್ಥಹಳ್ಳಿ ತಾಲ್ಲೂಕುಸೋಮಶೇಖರ ಕೆ9108280642

Leave a Reply

Your email address will not be published. Required fields are marked *