Oplus_131072

ತೀರ್ಥಹಳ್ಳಿ : ತಾಲೂಕಿನ ಸೊಪ್ಪುಗುಡ್ಡೆಯಲ್ಲಿರುವ ಸುವರ್ಣ ಸಂಸ್ಕೃತಿ ಮೈದಾನದಲ್ಲಿ ದಿ. 27 ರ ಗುರುವಾರದಂದು ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರಿ ಸಂಘ ನಿ. ತೀರ್ಥಹಳ್ಳಿ ಹಾಗೂ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತೀರ್ಥಹಳ್ಳಿ ಇವರ ಆಶ್ರಯದಲ್ಲಿ ವಿಶ್ವ ವಿಖ್ಯಾತ ಶ್ರೀ ಗೆಜ್ಜೆಗಿರಿ ಕ್ಷೇತ್ರದ ಪುರಾಣ ಕಾರಣಿಕವನ್ನು ಸಾರುವ ಐತಿಹಾಸಿಕ ಪ್ರಸಂಗ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಎಂಬ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ಬಯಲಾಟವಾಗಿ ಆಡಿ ತೋರಿಸಲಿದ್ದು

ಈ ಕಾರ್ಯಕ್ರಮಕ್ಕೆ ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಹೊದಲ ಶಿವು ಹಾಗೂ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತೀರ್ಥಹಳ್ಳಿ ಘಟಕದ ಅಧ್ಯಕ್ಷರಾದ ವಿಶಾಲ್ ಕುಮಾರ್ ಅತ್ಹ್ಮಿಯವಾಗಿ ಸ್ವಾಗತಿಸಿದ್ದಾರೆ.

ಇದೇ ವೇಳೆ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ಮಲೆನಾಡು ಪ್ರದೇಶಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ ಗೌಡರಿಗೆ ಸನ್ಮಾನ ಕಾರ್ಯಕ್ರಮವಿರಲಿದೆ.

ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಕಾರ್ಯಕ್ರಮ ದ ಪ್ರಯುಕ್ತ ನಾಳೆ ಮದ್ಯಾಹ್ನ 12.30 ಕ್ಕೆ ಸರಿಯಾಗಿ ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರ ಸಂಘದ ನಿರ್ದೇಶಕರಾದ ಶ್ರೀಮತಿ ಶ್ವೇತಾ ಶಬರೀಶ್ ರವರ ಬೆಟ್ಟಮಕ್ಕಿ ಮನೆಯಲ್ಲಿ ಗಣಪತಿ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನೆಡೆಯಲಿದೆ, ಈ ಕಾರ್ಯಕ್ರಮ ಕ್ಕೆ ಪೂಜ್ಯ ಸ್ವಾಮೀಜಿಯವರಾದ ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿ ಯವರು ಆಗಮಿಸಲಿದ್ದಾರೆ. ಎಲ್ಲಾ ಸಹಕಾರಿ ಸಂಘದ ಪದಾಧಿಕಾರಿಗಳು ಸಂಘಟನೆಯ ಸದಸ್ಯರು ಕುಟುಂಬ ಸಮೇತರಾಗಿ ಆಗಮಿಸಬೇಕಾಗಿ ಹೊದಲ ಶಿವು ಆಹ್ವಾನಿಸಿದ್ದಾರೆ.

Oplus_131072

ಪ್ರಸಂಗದ ವಿಶೇಷತೆ :

  • ಅತ್ರಿ ಮಹರ್ಷಿಗಳು ಮಾಡಿದ ತಪೋಯಾಗದಿಂದ ಆದಿ ಮಾಯೆ ಧೂಮವತಿ ಶಕ್ತಿಯಾಗಿ ಹೊರಹೋಮ್ಮಿದ್ದು
  • ಗರುಡನ ಅಬ್ಬರದ ರಂಗ ಪ್ರವೇಶ
  • ಗರುಡ ಆದಿ ಶೇಷನ ವಾದ ವಿವಾದ
  • ದೇಯಿ ಬೈದತಿ ಕಾಯಬಿಟ್ಟು ಮಾಯ ಸೇರುವ ವಿಭಿನ್ನ ದೃಶ್ಯ
  • ಕೋಟಿ – ಚೆನ್ನಯ್ಯರ ರಂಗ ಪ್ರವೇಶ
  • ಚಂಡೆ ಮದ್ದಾಳೆಯಲಿ ಗುಳಿಗನ ಆರ್ಭಟ
  • ಕುಪ್ಪೆ ಪಂಜುರ್ಲಿಯ ಅಬ್ಬರದ ಪ್ರವೇಶ

Leave a Reply

Your email address will not be published. Required fields are marked *