ಶಿವಮೊಗ್ಗ : ಕಡೂರು ತಾಲೂಕು ಜೋಗಿಹಳ್ಳಿ ವಿಶ್ವನಾಥ್ ಎಂಬುವರು 112 ಕರೆ ಮಾಡಿ ತಂದೆ ಚಂದ್ರಪ್ಪ( 65) ಮನೆ ಬಿಟ್ಟು ಹೋಗಿ ಕಾಣೆಯಾಗಿದ್ದು ಸದರಿ ವ್ಯಕ್ತಿಯು ಶಿವಮೊಗ್ಗದಲ್ಲಿ ತಮ್ಮ ಸ್ನೇಹಿತ ರವರಿಗೆ ಕರೆ ಮಾಡಿ ಶಿವಮೊಗ್ಗದ ಆಗುಂಬೆಗೆ ಹೋಗಿ ಮನನೊಂದಿದರಿಂದ ಪ್ರಾಣ ಕಳೆದುಕೊಳ್ಳುವುದಾಗಿ ಹೇಳಿದ್ದಾರೆ ಎಂಬ ದೂರಿನ ಅನ್ವಯ, ಸದರಿ ವ್ಯಕ್ತಿಯ ಚಹರೆ ಫೋಟೋವನ್ನು ತೆಗೆದುಕೊಂಡು ಕಾರ್ಯಾಚರಣೆ ನಡೆಸಿದ್ದು

ಶಿವಮೊಗ್ಗದಿಂದ ಆಗುಂಬೆಯ ಮಾರ್ಗವಾಗಿ ಹೋಗುವ ವಾಹನ ತಪಾಸಣೆ ಮಾಡುತಿದ್ದ ವೇಳೆ ಬಸ್ ತಪಾಸಣೆ ವೇಳೆ ಸದರಿ ವ್ಯಕ್ತಿ ಚಂದ್ರಪ್ಪ ತೀರ್ಥಳ್ಳಿಯ ಬಸ್ ಸ್ಟ್ಯಾಂಡ್ ಬಳಿ ಕಂಡುಬಂದಿದ್ದು ವ್ಯಕ್ತಿಯನ್ನು ವಿಶ್ವನಾಥ್ ಕರೆಯಿಸಿ ಸದರಿ ಚಂದ್ರಪ್ಪ ರವರನ್ನು ಸಮಾಧಾನಪಡಿಸಿ ಅವರ ಮಗನ ಬಳಿ ಹಸ್ತಾಂತರಿಸಲಾಯಿತು.ಇನ್ನು ಈ ಕಾರ್ಯಚರಣೆಯಲ್ಲಿದ್ದ 112 ಪೊಲೀಸರಾದ ಲೋಕೇಶ್ ಹಾಗೂ ಡ್ರೈವರ್ ಜಾಫರ್ ಅವರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *