ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಇದ್ಯಾವ ಸೀಮೆ ರಾಜಕೀಯ – ಸಾರ್ವಜನಿಕರ ಪ್ರಶ್ನೆ – ರೆಹಮತ್ ಉಲ್ಲಾ ಅಸಾದಿ ಮುಂದಿನ ನಡೆ ಏನು?

ತೀರ್ಥಹಳ್ಳಿ : ತಾಲೂಕಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿಯವರ ಮೇಲೆ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರಸ್ ಪಕ್ಷದ ಸದಸ್ಯರು ಕೂಡ ಹಗೆ ಸಾದಿಸಿದ್ದು ಮೇಲ್ನೋಟಕ್ಕೆ ಕಂಡುಬರುತಿದೆ.

ಸೆ 16ರಂದು ಅಸಾದಿಯವರು ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿ ಇದೀಗ 20/09/2025 ರಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸದಸ್ಯರು ಅಧ್ಯಕ್ಷರ ವಿರುದ್ಧ ಆವಿಶ್ವಾಸ ಗೊತ್ತುವಳಿ ಮಂಡಿಸಿದ್ದ ಹಿನ್ನಲೆಯಲ್ಲಿ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ರಾಜೀನಾಮೆ ನೀಡಿದ ನಂತರವು ಇಂತಹ ಬೆಳವಣಿಗೆಯಲ್ಲಿ ದ್ವಂದ್ವ ಚರ್ಚೆಗೆ ಗ್ರಾಸವಾಗಿದೆ. ಒಟ್ಟಿನಲ್ಲಿ ಅಸಾದಿಯವರ ಮುಂದಿನ ನಡೆಯ ಬಗ್ಗೆ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *