• ಚೆನ್ನೈ ಸೂಪರ್‌ ಕಿಂಗ್ಸ್‌ ಮಣಿಸಿ ಪ್ಲೇಆಫ್‌ ಪ್ರವೇಶ

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಮೇ 18 ರಂದು ಭರ್ಜರಿ ಜಯದೊಂದಿಗೆ ಆರ್‌ಸಿಬಿ ಪ್ಲೇಆಫ್‌ ಪ್ರವೇಶ ಮಾಡಿದೆ.ಬೆಂಗಳೂರಿನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ರಾಜಧಾನಿ ಮಾತ್ರವಲ್ಲದೆ ಭಾರತದಾದ್ಯಂತ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಆರ್ ಸಿ ಬಿ ಹೊಸ ಅಧ್ಯಾಯ ಆರಂಭ!

ಪಂದ್ಯಾಟ ಆರಂಭಕ್ಕೂ ಮುನ್ನ ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂದು ವಿರಾಟ್‌ ಕೊಹ್ಲಿ ಹೇಳಿದ್ದರು. ಅದು ಸಾಬೀತಾಗಿದೆ. ಐಪಿಎಲ್‌ 2024ರ ಮೊದಲಾರ್ಧದ ನಂತರ, ಆರ್‌ಸಿಬಿ ತಂಡ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶ 1 ಶೇಕಡಕ್ಕಿಂತ ಕಡಿಮೆ ಎಂದು ಹೇಳಲಾಗಿತ್ತು. ಅದನ್ನು ಫಾಫ್‌ ಪಡೆ ಸುಳ್ಳಾಗಿಸಿದೆ. ಪ್ಲೇಆಫ್​ ಪ್ರವೇಶಿಸುವುದೇ ಅನುಮಾನ ಎಂದು ಹೇಳಲಾಗುತ್ತಿದ್ದ ತಂಡವು, ಇದೀಗ ಮಾಜಿ ಚಾಂಪಿಯನ್‌ಗಳನ್ನು ಮಣಿಸಿ ನಾಲ್ಕನೇ ತಂಡವಾಗಿ‌ ಮುಂದಿನ ಹಂತ ತಲುಪಿದೆ.

ಶೇಕ್‌ಹ್ಯಾಂಡ್ ಮಾಡದೇ ಹೊರಟ ಧೋನಿ!

ಪಂದ್ಯ ಗೆದ್ದ ಮೇಲೆ ಶೇಕ್‌ಹ್ಯಾಂಡ್ ಮಾಡೋದು ಒಂದು ಸಂಪ್ರದಾಯ ಅಂದ್ರೆ ತಪ್ಪಾಗಲ್ಲ. ಸೋಲು ಗೆಲುವು ಅನ್ನೋದು ಆಟದಲ್ಲಿ ಕಾಮನ್‌. ಎರಡು ತಂಡದ ಆಟಗಾರರು ಪಂದ್ಯದ ಬಳಿಕ ಒಬ್ಬೊರಿಗೊಬ್ಬರು ಶೇಕ್‌ಹ್ಯಾಂಡ್ ಮಾಡುತ್ತಾರೆ. ಆದ್ರೆ ಯಾಕೋ ಧೋನಿ ನಿನ್ನೆ ಎಲ್ಲರಿಗೂ ಶೇಕ್‌ಹ್ಯಾಂಡ್ ಮಾಡದೇ ಡ್ರೆಸ್ಸಿಂಗ್‌ ರೂಂಗೆ ಹೋಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

18 ರ ನಂಟು

18ನೇ ನಂಬರ್‌ ಜರ್ಸಿ ಹೊಂದಿದ್ದ ವಿರಾಟ್‌ ಕೊಹ್ಲಿ.18ನೇ ತಾರೀಖು ನಡೆಯುವಂತಹ ಪಂದ್ಯ.2014ರಲ್ಲೂ ಸಿಎಸ್‌ಕೆ ಎದುರು ಮೇ 18 ರಂದು ಪಂದ್ಯಾಟ ಇದ್ದಿದ್ದು.ನಿನ್ನೆಯ ಪಂದ್ಯದಲ್ಲಿ ಚೆನ್ನೈ ಗೆ 218 ರ ಗುರಿ.

Leave a Reply

Your email address will not be published. Required fields are marked *