ದುಡಿಮೆ ಇಲ್ಲದೆ ಕೆಲಸಗಾರರ ಬದುಕು ಅತಂತ್ರ – ನನ್ನ ಮಕ್ಕಳಿಗೆ ಕೆಲಸಕೊಡಿಸಿ – ಲಾಂಚ್ ನ ಅಳಲು

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸೇತುವೆ ಕಳೆದ 2 ದಿನದ ಹಿಂದೆ ಲೋಕಾರ್ಪಣೆಯಾಗಿದೆ.ಓಡಾಟ ಕಷ್ಟಕರವಾದ ಹಿನ್ನಲೆ ಇದೀಗ ಜನರು ಸಂತಸ ಪಟ್ಟಿದ್ದಾರೆ. ಆದರೆ ಸಣ್ಣ ನೋವಿನ ಸಂಗತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಖುಷಿಗಿಂತ ಬೇಸರವೇ ಹೆಚ್ಚಾಗುವಂತಿದೆ.

ಹಲವಾರು ವರ್ಷಗಳಿಂದ ಸಾಗರದ ಸಿಗಂದೂರಿಗೆ ಲಾಂಚ್ ಮೂಲಕ ತೆರಳಲಾ ಗುತಿತ್ತು,ಸುಅರವತ್ತು ವರ್ಷ ದೋಣಿಯಾಗಿ,ಜಂಗಲ್ ಬೋಟಾಗಿ,ಲಾಂಚಾಗಿ ಒಂದು ದಡದಿಂದ ಇನ್ನೊಂದು ದಡಕ್ಕೆ ಸೇರಿಸುವ ಲಾಂಚ್ ಇಂದು ತನ್ನ ಕರ್ತವ್ಯ ಮುಗಿಸಿ ನಿಂತು ಬಿಟ್ಟಿದೆ. ಲಾಂಚ್ ನಲ್ಲಿ ಕೆಲಸ ಮಾಡುವ 15 ಜನರಿಗೆ ಕೆಲಸವಿಲ್ಲದೆ ಮುಂದಿನ ಜೀವನ ನೆನೆಸಿ ಕಣ್ಣೀರಿಡುತ್ತಿದ್ದಾರೆ.ತಾವು ಕೆಲಸ ಮಾಡುತಿದ್ದ ಲಾಂಚ್ ಅನ್ನು ಹೆತ್ತ ತಾಯಿಗಿಂತಲೂ ಹೆಚ್ಚಾಗಿ ಪ್ರೀತಿಸಿ ನಿಷ್ಠೆ ಯಿಂದ ಕೆಲಸ ಮಾಡುತಿದ್ದ ಹುಡುಗರ ಜೀವನದಲ್ಲಿ ಕೇಬಲ್ ಸೇತುವೆ ಆದ ಲೋಕಾರ್ಪಣೆ ನಂತರ ಕೆಲಸವಿಲ್ಲದೆ ಕಂಗಾಲಾಗಿದ್ದು ಸಾಗರದ ಜನಪ್ರಿಯ ಶಾಸಕರಾದ ಬೇಳೂರು ಗೋಪಾಲ ಕೃಷ್ಣ ರು ಇವರ ಮುಂದಿನ ಜೀವನ ಗಮನದಲ್ಲಿಟ್ಟುಕೊಂಡು ಕೆಲಸ ಕೊಡಿಸಲು ಸಹಕರಿಸಲಿ ಎಂಬುದು ಸಾರ್ವಜನಿಕರು,ಹಿನ್ನಿರ ಜನತೆ ಹಾಗೂ ಸತ್ಯಶೋಧ ಮಾಧ್ಯಮದ ಒತ್ತಾಯ ವಾಗಿದೆ.

Leave a Reply

Your email address will not be published. Required fields are marked *