– ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವೇನು?
– ಅರಣ್ಯ ಅಧಿಕಾರಿಗಳಿಗೆ ರಾಜ್ಯದ ಜನತೆಯ ಪ್ರಶ್ನೆಗಳೇನು?

ಇತ್ತೀಚೆಗೆ ಹುಲಿ ಉಗುರು ಪ್ರಕರಣ ಟ್ರೆಂಡ್ ಆಗಿದೆ. ಮೋದ ಮೊದಲು ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ನ್ಯಾಯಾಂಗ ಬಂಧನವಾದ ಮೇಲೆ ಅರಣ್ಯ ಅಧಿಕಾರಿಗಳು ದರ್ಶನ್, ಜಗ್ಗೇಶ್, ನಿಖಿಲ್, ವಿನಯ್ ಗುರೂಜಿ ಹೀಗೆ ಹಲವರ ಮನೆಗೆ ಧಾವಿಸಿ ತಪಾಸಣೆ ನಡೆಸಿದ್ದಾರೆ.
ಅರಣ್ಯ ಅಧಿಕಾರಿಗಳಿಗೆ ರಾಜ್ಯದ ಜನತೆಯ ಪ್ರಶ್ನೆಗಳೇನು?
■ ಹುಲಿ ಉಗುರು ಟ್ರೆಂಡ್ ಆಗೋ ಮುಂಚೆ ಅರಣ್ಯ ಅಧಿಕಾರಿಗಳ ಎದುರೇ ಹುಲಿ ಉಗುರು ಧರಿಸಿ ಓಡಾಡುತ್ತಿದ್ದರು ಅಗೆಲ್ಲಿ ಹೋಗಿತ್ತು ನಿಮ್ಮ ಇಲಾಖೆ ■ ರಾಜ್ಯದಲ್ಲಿ ಎಷ್ಟು ಹುಲಿಗಳು ಇವೆ ಹಾಗೂ ಎಷ್ಟು ಹುಲಿಗಳು ಸತ್ತಿವೆ ಎಂಬ ಮಾಹಿತಿ ನಿಮ್ಮಲಿಲ್ಲವೇ?■ ಮಾಹಿತಿ ಇರುವ inventory ದಾಖಲಾತಿಗಳು ಎಲ್ಲಿವೆ ? ■ ಅರಣ್ಯ ಅಧಿಕಾರಿಗಳು ಹುಲಿ ಉಗುರು ಹಾಕಿದ್ದನ್ನು ನೋಡಿದ್ದೇವೆ ಅವರನ್ನು ಬಂಧಿಸಿ ■ ಮೊದಲು ನಿಮ್ಮೆದುರಿಗೆ ಹುಲಿ ಉಗುರು ಹಾಕಿದವರನ್ನು ನೀವೇಕೆ ಬಂದಿಸಲಿಲ್ಲ ? ಇಲ್ಲಿ ನಿಮ್ಮ ಶಾಮೀಲು ಇದೆಯಾ ?
*ಈ ಬಗ್ಗೆ ಆರಗ ಪ್ರತಿಕ್ರಿಯೆ*
“ಮಲೆನಾಡು, ಕರಾವಳಿ ಭಾಗದ ಅನೇಕ ಮನೆಗಳಲ್ಲಿ ಹುಲಿ ಉಗುರು ಸೇರಿದಂತೆ ವನ್ಯಜೀವಿಗಳ ಉತ್ಪನ್ನಗಳನ್ನು ಇಟ್ಟುಕೊಳ್ಳುವುದು ಬಹಳ ವರ್ಷಗಳಿಂದ ನಡೆಯುತ್ತಿದೆ. ಈ ಕಾರಣಕ್ಕಾಗಿ ಜನರನ್ನು ಏಕಾಏಕಿ ಬಂಧಿಸುವುದು ಸರಿಯಲ್ಲ. ಈ ಕುರಿತು ಸರ್ಕಾರ ಮಧ್ಯಪ್ರವೇಶಿಸುವುದು ಅವಶ್ಯ.”
- ಆರಗ ಜ್ಞಾನೇಂದ್ರ ಶಾಸಕರು ,ಮಾಜಿ ಗೃಹ ಸಚಿವರು ಕರ್ನಾಟಕ ಸರ್ಕಾರ