Oplus_131072

ತೀರ್ಥಹಳ್ಳಿ :ರಕ್ಷಿತ್ ತೀರ್ಥಹಳ್ಳಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ತಿಮ್ಮನ ಮೊಟ್ಟೆಗಳು” ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಇದೇ ಜೂನ್ 27 ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ವಾಸುಕಿ ವೈಭವ್ ಹಾಡಿರುವ “ಕಾಡು ದಾರಿ” ಎಂಬ ಹಾಡಿನ ಲಿರಿಕಲ್ ವಿಡಿಯೋ ಅನಾವರಣ ಮಾಡುವುದರೊಂದಿಗೆ ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ನಿರ್ಮಾಣಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ ಹೂಡಿದ್ದಾರೆ. ರಕ್ಷಿತ್ ತೀರ್ಥಹಳ್ಳಿಯವರು ಬರೆದ “ಕಾಡಿನ ನೆಂಟರು” ಕಥಾ ಸಂಕಲನದಿಂದ ಆಯ್ದ ಒಂದು ಕಥೆ ತಿಮ್ಮನ ಮೊಟ್ಟೆಗಳು ಸಿನಿಮಾವಾಗಿದೆ.ಇನ್ನು ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ತೀರ್ಥಹಳ್ಳಿಯ ಹಾಸ್ಯ ಕಲಾವಿದರಾದ ಕೇಶವ್ ಗುತ್ತಳಿಕೆ ಇವರು ನಟಿಸಿದ್ದು ಚಿತ್ರ ತಂಡಕ್ಕೆ ಹಾಗೂ ಕೇಶವ್ ಗುತ್ತಳಿಕೆ ಇವರಿಗೆ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷರಾದ ಮಳಲಿಕೊಪ್ಪ ಧರಣೇಶ್ ಶುಭಾಶಯ ತಿಳಿಸಿದ್ದಾರೆ.

ಇನ್ನು ತೀರ್ಥಹಳ್ಳಿಯ ಯುವ ಸಾಧಕ ರಕ್ಷಿತ್ ತೀರ್ಥಹಳ್ಳಿಯವರ ತಿಮ್ಮನ ಮೊಟ್ಟೆಗಳು ಚಿತ್ರವನ್ನು ಚಿತ್ರ ಮಂದಿರದಲ್ಲೇ ಹೋಗಿ ನೋಡಿ ಹಾರೈಸಲಿ ಎಂಬುದು ಸತ್ಯಶೋಧ ಮಾಧ್ಯಮದ ಆಶಯ.

Oplus_131072

Leave a Reply

Your email address will not be published. Required fields are marked *