ತೀರ್ಥಹಳ್ಳಿ : ಬೈಕ್ ಹಾಗೂ ರಾಜಹಂಸ ಬಸ್ ನಡುವೆ ಭೀಕರ ಅಪಘಾತವಾಗಿದ್ದು ಬುಧವಾರ ತಡ ರಾತ್ರಿ ರಂಜದಕಟ್ಟೆ ಸಮೀಪದ ಶಿವರಾಜಪುರ ಬಳಿ ನಡೆದಿದೆ.ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು,ಪುನೀತ್ (26 ವರ್ಷ) ಮೃತಪಟ್ಟ ಯುವಕ.

ರಂಜದಕಟ್ಟೆ ಸಮೀಪದ ಮೀನುಗುಂದ ಗ್ರಾಮದ ಯುವಕ ಕುರುವಳ್ಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು,ನಿನ್ನೆ ರಾತ್ರಿ ವಿನಾಯಕ ಚಿತ್ರಮಂದಿರದಲ್ಲಿ ಡೆವಿಲ್ ಚಿತ್ರದ ಬಿಡುಗಡೆ ಸಂಭ್ರಮದಲ್ಲಿ ಭಾಗಿಯಾಗಿದ್ದ. ಸಂಭ್ರಮ ಮುಗಿಸಿ ಮನೆಗೆ ಹೋಗುವ ಸಂದರ್ಭದಲ್ಲಿ ಈ ಅವಘಡ ನಡೆದಿದೆ.ಅಪಘಾತ ಆದಾಗ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು ಆಸ್ಪತ್ರೆಗೆ ರವಾನಿಸುವ ಮೊದಲೇ ಯುವಕ ಸಾವನ್ನಪ್ಪಿದ್ದಾನೆ.ಘಟನೆ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *