ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ

ತೀರ್ಥಹಳ್ಳಿ : ತಾಲೂಕಿನ ಆಗುಂಬೆಯ ಟೌನ್ ವಲಯದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾಗಿದ್ದು ಘಟನೆ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸುಮಾರು 2 ದಿನಗಳ ಹಿಂದೆಯೇ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.ಅರಣ್ಯ ಇಲಾಖೆಯ ಹಂಗಾಮಿ ನೌಕರನಾಗಿ ಕೆಲಸ ಮಾಡುತಿದ್ದ ರಾಘವೇಂದ್ರ ಮದ್ಯಪಾನ

Oplus_131072

ಮಾಡಿ ಮಲಗಿದ್ದು ಯಾರಿಗೂ ಸಹ ತಿಳಿದಿಲ್ಲ ಜೊತೆಗೆ ಕುಟುಂಬದಲ್ಲಿ ಅವರಿಬ್ಬರೇ ಇದ್ದ ಹಿನ್ನಲೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಮೃತರ ಪಾರ್ಥವ ಶರೀರವನ್ನು ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.ಘಟನೆ ಬಗ್ಗೆ ಆಗುಂಬೆ ಪೊಲೀಸ್ ಪಿ ಎಸ್ ಐ ಶಿವನ ಗೌಡ ಪಾಟೀಲ್ ಭೇಟಿ ನೀಡಿ ಸ್ಥಳ ಮಹಜರು ಮಾಡಿ ಕೇಸು ದಾಖಲಿಸಲಾಗಿದೆ. ಸಾವಿನ ಬಗ್ಗೆ ನಿಖರವಾದ ಮಾಹಿತಿ ಇನ್ನಷ್ಟೇ ಬರಬೇಕಿದೆ.

Leave a Reply

Your email address will not be published. Required fields are marked *