ರೈತರ ಜಮೀನಿನಲ್ಲಿ ದಾಂದಲೇ ಬೆಳೆ ನಾಶ – ಅನಾಹುತಕ್ಕೂ ಮುನ್ನ ಅರಣ್ಯ ಅಧಿಕಾರಿಗಳೇ ಗಮನ ಹರಿಸಿ – ಸಂದೀಪ್ ಗಾರ್ಡರಗದ್ದೆ

ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಹೋಬಳಿಯ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾರ್ಡರಗದ್ದೆ ಕಟ್ಟಿನ ಮಡಿಕೆಯಲ್ಲಿ ದಿ. 31/12/2025 ಬುಧವಾರ ಕಾಡಾನೇ ಪ್ರತ್ಯಕ್ಷ ವಾಗಿದ್ದು ಗಣೇಶ್ ಎಂಬ ರೈತರ ಜಮೀನಿಗೆ ನುಗ್ಗಿ ದಾಂದಲೇ ನಡೆಸಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ಇನ್ನು ಈ ಸಂಬಂಧ ನಾಲೂರು ಗ್ರಾಂ ಪಂ ಸದಸ್ಯರಾದ ಸಂದೀಪ್ ಗಾರ್ಡರಗದ್ದೆ ಅರಣ್ಯ ಇಲಾಖೆಯ ವಿರುದ್ಧ ಅಕ್ರೋಶ ಹೊರ ಹಾಕಿದ್ದು ಹೆಚ್ಚಿನ ಅನಾಹುತವಾಗುವ ಮುಂಚೆ ಎಚ್ಚತ್ತುಕೊಳ್ಳಿ ಎಂದು ಸತ್ಯಶೋಧ ಮಾಧ್ಯಮದ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *