
- ರೈತರ ಗದ್ದೆ ನಾಶ – ಅರಣ್ಯಧಿಕಾರಿಗಳೇ ದಯವಿಟ್ಟು ಗಮನಿಸಿ
ತೀರ್ಥಹಳ್ಳಿ :ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಮ್ಮರಡಿ ಹತ್ತಿರ ಹಡ್ಸೆ ಯ ಕೃಷ್ಣಪ್ಪ ಹೆಚ್ ಸಿ ಮತ್ತು ಸುಂದ್ರೇಶ್ ಹೆಚ್ ಡಿ ಎಂಬುವವರ ಗದ್ದೆಯ ಭತ್ತದ ಸಸಿಗಳನ್ನು

ಕಾಡು ಕೋಣಗಳು ನಾಶ ಮಾಡಿದ್ದು ರೈತರು ಅರಣ್ಯ ಇಲಾಖೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇಗರವಳ್ಳಿ ವಲಯ ಅರಣ್ಯ ಅಧಿಕಾರಿಗಳಿಗೆ ಮನವಿ ನೀಡಿದ್ದು ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

