
ತೀರ್ಥಹಳ್ಳಿ : ತಾಲೂಕಿನ ಅರೇಹಳ್ಳಿ ಗ್ರಾಂ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದಿಂದ ಬಡವರಿಗೆ ಮನೆ ನೀಡಿದ್ದು ಮನೆ ಕಟ್ಟಲು ಮರಳು ಬೇಕಾಗಿದ್ದು ಬಡವರ ಪರ ನಿಂತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಮೇಲೆ ಪೊಲೀಸ್, ಹಾಗೂ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ದಬ್ಬಾ ಳಿಕೆ ನಡೆಯುತ್ತಿದೆ ಎಂದು ಸ್ಥಳೀಯರ ವಾದವಾಗಿದೆ.

ಅಕ್ರಮವಾಗಿ ಮರಳು ಹಿಡೆಯುವವರನ್ನೂ ತಡೆಯದೇ ಮನೆ ಕಟ್ಟಲು ಬೇಕಾಗುವ ಸಾಮಗ್ರಿಗಳಲ್ಲಿ ಮುಖ್ಯವಾದದ್ದು ಮರಳು ಅದನ್ನು ಹೊಡೆಯಲು ಗ್ರಾಂ ಪಂ ಅವಕಾಶ ನೀಡಿದ್ದು ಈ ವೇಳೆ ಯಾರೋ ಒಬ್ಬ ಪೊಲೀಸರಿಗೆ ದೂರು ನೀಡುತ್ತಿದ್ದಾನೆ ಇದು ಉತ್ತಮ ಬೆಳವಣಿಗೆಯಲ್ಲ ಎಂಬುದು ಸ್ಥಳೀಯರು ಹಾಗೂ ಗ್ರಾಂ ಪಂ ಅಧ್ಯಕ್ಷರು ಹಾಗೂ ಸದಸ್ಯರ ವಾದವಾಗಿದೆ.

ಈ ವಿಷಯದಲ್ಲಿ ಪೊಲೀಸರು ಹಾಗೂ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ಮದ್ಯ ಬರುತಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಂ ಪಂ ಗೆ ಬೀಗ ಹಾಕಿ ಪ್ರತಿಭಟನೆ ಮಾಡಿದ ಹಿನ್ನಲೆಯಲ್ಲಿ ಆಗುಂಬೆ ಪೊಲೀಸರು ಬಂಧಿಸಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಡುತ್ತಿದ್ದು ಪೊಲೀಸರು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕಿದೆ.