

ತೀರ್ಥಹಳ್ಳಿ : ತಾಲೂಕಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸ್ವಾಪಕ್ಷ ಹಾಗೂ ಕೆಲ ಸದಸ್ಯರಿಂದ ಅವಿಶ್ವಾಸ ನಿರ್ಣಯವಾದ ಹಿನ್ನೆಲೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ಇದೀಗ ಹೈಕೋರ್ಟ್ ಸದ್ಯದ ಮಟ್ಟಿಗೆ ರೆಹಮತ್ ಉಲ್ಲ ಅಸಾದಿ ಅನಿರ್ದಿಷ್ಟಾವಧಿ ತನಕ ಅಧ್ಯಕ್ಷರಾಗಿ ಮುಂದುವರೆಯಲು ಹೈಕೋರ್ಟ್ ಸೂಚಿಸಿದೆ.

ಇದರ ಅನ್ವಯ ಮುಂದಿನ ಕೋರ್ಟ್ ವಿಚಾರಣೆ ತನಕ ಅಸಾದಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಜೊತೆಗೆ ಅಸಾದಿ ಮಾಡಿದ ಸೇವೆ, ಹಾಗೂ ಕೆಲಸಗಳು ಜನರ ಮನಸಲ್ಲಿ ಶಾಶ್ವತವಾಗಿ ಉಳಿದಿದ್ದು, ಅವೆಲ್ಲದರ ಫಲವೆ ಕೋರ್ಟ್ ತೀರ್ಮಾನ ಎಂಬುದು ತೀರ್ಥಹಳ್ಳಿಗರ ಮಾತಾಗಿದೆ.

