Oplus_131072

ತೀರ್ಥಹಳ್ಳಿ : ತುಂಗಾ ಕಾಮಾನು ಸೇತುವೆಯ ಕೆಳ ಭಾಗದಲ್ಲಿ ಕಮಾನಿಗೆ ಅಳವಡಿಸಲಾಗಿರುವ ಕಂಬದ ಕೆಳಗೆ ಅಸ್ತಿ ಪಂಜರವೊಂದು ಪತ್ತೆಯಾಗಿದೆ.ಮಳೆಗಾಲದ ಸಂದರ್ಭದಲ್ಲಿ ನೀರಿನ ಜೊತೆಗೆ ಬಂದು ಕಲ್ಲಿನ ಬಂಡೆಯ ಮಧ್ಯದಲ್ಲಿ ಸಿಲುಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು ತುಂಗಾ ನದಿ ಶೃಂಗೇರಿ ಭಾಗದಿಂದ ಹರಿಯುತ್ತಿದ್ದು ಆ ಭಾಗದಲ್ಲಿ ಯಾರಾದರೂ ಕಾಣೆಯಾಗಿದ್ದಾರ ಎಂಬುದು ಕಂಡು ಹಿಡಿಯಬೇಕಿದೆ.

ಇನ್ನು ಈ ಕಳೆದು ಹೋದ ವಿಚಾರದಲ್ಲಿ ಮಳೆಗಾಲದ ಸಮಯದಲ್ಲಿ ಕಮ್ಮರಡಿ ಸಮೀಪದ ವೃದ್ದೆಯೊಬ್ಬರು ಕಾಣೆಯಾಗಿದ್ದು ಅವರದ್ದೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಸ್ಥಳೀಯ ಮೀನುಗಾರರು ಮೀನು ಹಿಡಿಯುವ ಸಂದರ್ಭದಲ್ಲಿ ಇದನ್ನು ನೋಡಿದ್ದಾರೆ. ತಕ್ಷಣವೇ ಪೊಲೀಸ್ ಗೆ ಮಾಹಿತಿ ನೀಡಿದ್ದು ಪೊಲೀಸರು ಪರಿಶೀಲನೆ ನಡೆಸಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ.

Oplus_131072

Leave a Reply

Your email address will not be published. Required fields are marked *