
ತೀರ್ಥಹಳ್ಳಿ : ದಿ. 5 ರ ಮಧ್ಯಾಹ್ನ 3:30 ರ ಸಮಯದಲ್ಲಿ ತುಂಗಾ ನದಿಯ ತುಂಗಾ ಕಮಾನು ಸೇತುವೆ ಬಳಿ ಮೃತದೇಹವೊಂದು ತೇಲಿ ಬಂದಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ.ತೀರ್ಥಹಳ್ಳಿಯ ಶಿವರಾಜ ಪುರದ ರಾಮಚಂದ್ರ ಶೆಟ್ಟಿ (64) ಎಂದು ತಿಳಿದು ಬಂದಿದ್ದು, ಮೃತರು ಪದೇ ಪದೇ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಈ ಹಿಂದೆಯೂ ಹಲವು ಬಾರಿ ಮನೆ ಬಿಟ್ಟು ವಾರಗಟ್ಟಲೆ ಹೋಗಿದ್ದು ಇದೆ ಎನ್ನಲಾಗಿದೆ.ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










