
ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಬಸ್ ನಿಲ್ದಾಣದ ಹತ್ತಿರ ಆಭರಣ ಜ್ಯುವೆಲ್ಲರ್ಸ್ ಎದುರು ನೂತನವಾಗಿ ಗ್ಲಾಮರ್ ಕೇರ್ ಫ್ಯಾಮಿಲಿ ಸಲೂನ್ ಫೆ 26 ರಂದು ಶುಭಾರಂಭಗೊಂಡಿದ್ದು , ಈ ಸಲೂನ್ನನ್ನು ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.ಗ್ಲಾಮರ್ ಕೇರ್ ಫ್ಯಾಮಿಲಿ ಸಲೂನ್ ಈಗಾಗಲೇ ರಾಜ್ಯದ ಹಲವು ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ತನ್ನ ಶಾಖೆಯನ್ನು ತೆರೆದು ಅತ್ಯುನ್ನತ ಸೇವೆಯನ್ನು ಗ್ರಾಹಕರಿಗೆ ನೀಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು

ಇದೀಗ ತೀರ್ಥಹಳ್ಳಿ ಯಲ್ಲಿ ಗ್ಲಾಮರ್ ಕೇರ್ ನ ಶಾಖೆಯು ತೀರ್ಥಹಳ್ಳಿಗರಿಗೆ ಸಂತಸದ ವಿಷಯವಾಗಿದೆ.ಇನ್ನು ಮಾಜಿ ಸಚಿವರಾದ ಕಿಮ್ಮನೆ ರತ್ನಕರ್, ಹಾಗೂ ಮಲೆನಾಡು ಪ್ರದೇಶಭಿವೃದ್ಧಿ ನಿಗಮ ದ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ್ ಗೌಡರು, ಸ್ಪಿನ್ ಸಲೂನ್ ಮಾಲೀಕರಾದ ನಾಮದೇವ್ ನಾಗರಾಜ್, ಹಾಗೂ ಶಿವಮೊಗ್ಗ ಜಿಲ್ಲಾ ಸವಿತ ಸಮಾಜದ ಅಧ್ಯಕ್ಷರಾದ ಎಂ ಜಿ ಬಾಲು ಅತಿಥಿಗಳಾಗಿ ಆಗಮಿಸಿ ನೂತನ ಶಾಖೆಗೆ ಶುಭಹಾರೈಸಿದರು.


