

ತೀರ್ಥಹಳ್ಳಿ : ಪಟ್ಟಣ ಪಂಚಾಯತಿ ಅಧ್ಯಕ್ಷ ಗಾದಿಯಿಂದ ರೆಹಮಾತ್ ಉಲ್ಲಾ ಅಸಾದಿಯನ್ನ ಕೆಳಗಿಳಿಸಲು ಸ್ವ ಪಕ್ಷ ಕಾಂಗ್ರೆಸ್ ನಿಂದಲೇ ತಕರಾರು ತೆಗೆದಿದೆ. ಇದರ ಮದ್ಯೆ ಅ.18 ರಂದು ತಮ್ಮ ವಿರುದ್ಧ ನಡೆಯಲಿರುವ ಅವಿಶ್ವಾಸ ಮತ ಗೊತ್ತುವಳಿ ಮಂಡನೆಗೆ ತಡೆಯಾಜ್ಞೆ ಕೋರಿ ಅಸಾದಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಪರಿಣಾಮ ಮಾನ್ಯ ಘನ ನ್ಯಾಯಾಲಯ ತಡೆಯಾಜ್ಞೆ ನೀಡುವುದನ್ನು ನಿರಾಕರಿಸಿದೆಯಾದರೂ ನ್ಯಾಯಾಲಯದ ತೀರ್ಪು ಹೊರಬರುವವರೆಗೂ ಅಧ್ಯಕ್ಷರಾಗಿ ಮುಂದುವರೆಯಲು ಅವಕಾಶ ನೀಡುವ ನೀಡಿದ್ದು,

ಅಸಾದಿಯವರ ನಿಸ್ವಾರ್ಥ ಸೇವೆಗೆ ಸಿಕ್ಕ ಪ್ರತಿಫಲವಾಗಿದೆ.ಯುವವಕೀಲ ಬಿ.ಎನ್. ಸುನೀಲ್ ಕುಮಾರ್ ಅಸಾದಿ ಪರ ಹೈಕೋರ್ಟ್ ನಲ್ಲಿ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯದಲ್ಲಿ ರಿಟ್.ಪಿಟೀಷನ್ ಸಂಖ್ಯೆ : W.P. 31481/2025 ಮೂಲಕ ಅವಿಶ್ವಾಸ ಗೊತ್ತುವಳಿಗೆತಡೆಯಾಜ್ಞೆ ಕೋರಿದ್ದು ಯಾವ ವಕೀಲರೂ ಅದರ ವಿರುದ್ಧ ತಕರಾರು ಅರ್ಜಿ ಸಲ್ಲಿಸಿಲ್ಲ. ನ್ಯಾಯಾಲಯ ಅಸಾದಿಯವರ ಅರ್ಜಿಯನ್ನು ಪುರಸ್ಕರಿಸಿ ಅ.18 ರಂದು ನಡೆಯುವ ಅವಿಶ್ವಾಸ ಗೊತ್ತುವಳಿಗೆ ತಡೆಯಾಜ್ಞೆ ನೀಡಿಲ್ಲವಾದರೂ ಅವಿಶ್ವಾಸ ಗೊತ್ತುವಳಿಯ ಫಲಿತಾಂಶ ಅಸಾದಿಯವರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಆದೇಶವನ್ನು ನೀಡಿದೆ.ಹಾಗೆಯೇ ನ್ಯಾಯಾಲಯದ ಮುಂದಿನ ಆದೇಶದವರೆಗೂ ಅವಿಶ್ವಾಸ ಗೊತ್ತುವಳಿಯ ಸಭೆಯನ್ನು ನಡೆಸಿದರೂ ಅವಿಶ್ವಾಸ ಮಂಡನೆಯ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡುವಂತಿಲ್ಲ ಎಂದು ವಕೀಲರಾದ ಸುನೀಲ್ ಕುಮಾರ್ ತಿಳಿಸಿದ್ದಾರಲ್ಲದೆ ಪ್ರಕರಣವನ್ನು ಅ.28 ಕ್ಕೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.


